ಬಾಲಕಿ ಮೇಲೆ ಆತ್ಯಾಚಾರ ಯತ್ನ

ಗಂಗೊಳ್ಳಿ: ಐದನೇ ತರಗತಿ ವಿದ್ಯಾರ್ಥಿನಿಯ ಮೇಲೆ ಅಪರಿಚಿತ ವ್ಯಕ್ತಿಯೊಬ್ಬ ಆತ್ಯಾಚಾರಕ್ಕೆ ಯತ್ನಿಸಿದ ಘಟನೆ ಗಂಗೊಳ್ಳಿಯ ಕೆಎಫ್ ಡಿಸಿ ವಠಾರದಲ್ಲಿ ನಡೆದಿದೆ.
   ಐದನೇ ತರಗತಿ ವಿದ್ಯಾರ್ಥಿನಿ ಎಂದಿನಂತೆ ಟ್ಯೂಷನ್‌ ಮುಗಿಸಿ ಬುಧವಾರ ಸಂಜೆ 6.45ರ ಸುಮಾರಿಗೆ ಮನೆಗೆ ನಡೆದು ಕೊಂಡು ಬರುತ್ತಿದ್ದಳು. ಖಾರ್ವಿ ಭಾಷೆ ಮಾತನಾಡುತ್ತಿದ್ದ ವ್ಯಕ್ತಿಯೊಬ್ಬ ಆಕೆಯನ್ನು ಮಾತನಾಡಿಸಿ ಈ ದಾರಿಯಲ್ಲಿ ಮುಂದೆ ಕಚ್ಚುವ ನಾಯಿಗಳಿವೆ ಅಲ್ಲಿ ಹೋಗಬೇಡ ನಿನ್ನ ತಂದೆಯ ಪರಿಚಯವಿದೆ ನಾನು ನಿನ್ನನ್ನು ಬೇರೆ ದಾರಿಯಲ್ಲಿ ಮನೆಗೆ ಕರೆದುಕೊಂಡು ಹೋಗುತ್ತೇನೆ ಎಂದು ಪುಸಲಾಯಿಸಿದ್ದಾನೆ.
    ಆತನ ಮಾತನ್ನು ನಂಬಿದ ಬಾಲಕಿ ಆತನೊಂದಿಗೆ ಕೆಎಫ್ ಡಿಸಿ ವಠಾರ ಸಮೀಪ ಯಾರೂ ಇಲ್ಲದ ಸ್ಥಳ ನೋಡಿ ಆಕೆಯನ್ನು ಹಿಡಿದುಕೊಂಡು ಆತ್ಯಾಚಾರಕ್ಕೆ ಯತ್ನಿಸಿದಾಗ ಆಕೆ ಕೂಗಾಡಿ ತಪ್ಪಿಸಿಕೊಂಡು ವಾಪಸ್‌ ಓಡಿ ಬಂದು ಸಮೀಪದ ಅಂಗಡಿಯವರಲ್ಲಿ ಹೇಳಿದ್ದಾಳೆ.ತಕ್ಷಣ ಸ್ಥಳೀಯರು ಆತನನ್ನು ಬೆನ್ನಟ್ಟಿದರಾದರೂ ಆತ ತಪ್ಪಿಸಿಕೊಂಡಿದ್ದಾನೆ
  ಗಂಗೊಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com