ಹೊಂಡಕ್ಕೆ ಉರುಳಿದ ಕಾರಿನ ಚಕ್ರ ಕಳವು

ಹೆಮ್ಮಾಡಿ : ವಂಡ್ಸೆಯಿಂದ ಹೆಮ್ಮಾಡಿ ಮಾರ್ಗವಾಗಿ ಸಾಸ್ತಾನದತ್ತ ಸಾಗುತ್ತಿದ್ದ ಸ್ಯಾಂಟ್ರೋ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಆಕಸ್ಮಿಕವಾಗಿ ಹೊಂಡಕ್ಕೆ ಉರುಳಿ ಕಾರು ಸಂಪೂರ್ಣವಾಗಿ ಜಖಂಗೊಂಡ ಘಟನೆ ಸಂಜೆ ದೇವಲ್ಕುಂದ ಸಮೀಪ ಸಂಭವಿಸಿದೆ.

ಗಾಯಗೊಂಡ ಚಾಲಕ ಕುಂದಾಪುರ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾತ್ರಿಯಾದ್ದರಿಂದ ಚಾಲಕ ಕಾರನ್ನು ಸ್ಥಳದಲ್ಲಿಯೇ ಬಿಟ್ಟುಹೋಗಿದ್ದು, ಅಂದೇ ರಾತ್ರಿ ಕೆಲವು ವ್ಯಕ್ತಿಗಳು ಈ ಕಾರಿನ ಚಕ್ರಗಳನ್ನು ಕಳವು ಮಾಡಿರುವುದು ಬೆಳಕಿಗೆ ಬಂದಿದೆ.

ರಾತ್ರಿ 2 ಗಂಟೆ ಸುಮಾರಿಗೆ ಬಹಿರ್ದೆಸೆಗಾಗಿ ಮನೆಯಿಂದ ಹೊರಗೆ ಬಂದಿದ್ದ ಶಿಕ್ಷಕ ಚಂದ್ರಶೇಖರ ಶೆಟ್ಟಿ ಕಾರು ಅಪಘಾತಕ್ಕೀಡಾದ ಸ್ಥಳದಲ್ಲಿ ಕೆಲವರು ಇರುವುದನ್ನು ಗಮನಿಸಿ ವಿಚಾರಿಸಿದಾಗ ತಾವು ಕಾರಿನ ಮಾಲಕರ ಕಡೆಯವರು ಎಂದು ಅಲ್ಲಿದ್ದ ವ್ಯಕ್ತಿಗಳು ಹೇಳಿದ್ದಾರೆ. ಯಾರು ನೋಡೋಣ ಬನ್ನಿ ಇಲ್ಲಿ ಎಂದು ಕರೆಯುತ್ತಿದ್ದಂತೆ ಆ ವ್ಯಕ್ತಿಗಳು ದ್ವಿಚಕ್ರ ವಾಹನದಲ್ಲಿ ಪರಾರಿಯಾಗಿದ್ದಾರೆ. ಕಾರಿನ ಹಿಂಭಾಗದ ಎರಡೂ ಚಕ್ರಗಳನ್ನು ಕಳ್ಳರು ಅಷ್ಟರಲ್ಲಿಯೇ ಕಳಚಿ ಒಯ್ದಿರುವುದು ಕಂಡುಬಂದಿದೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com