ಉಪ್ಪುಂದ ದರೋಡೆ ಪ್ರಕರಣ : ನಾಲ್ವರ ಬಂಧನ

ಉಪ್ಪುಂದ: ಇಲ್ಲಿನ ಸೋನಾರಕೇರಿಯ ಅಣ್ಣೆಮ್ಮಗದ್ದೆ ಸಮೀಪ ಆಭರಣ ಅಂಗಡಿಯನ್ನು ಮುಚ್ಚಿ ಮನೆಗೆ ತೆರಳುತ್ತಿದ್ದ ವೇಳೆ ಮಾಲಕರಾದ  ಗಣೇಶ್‌ ಶೇಟ್‌, ಅವರ ಪುತ್ರ ಸುಧೀಂದ್ರ ಶೇಟ್‌  ಹಾಗೂ ಮಗಳ ಮೇಲೆ ಮೆಣಸಿನ ಪುಡಿ ಎರಚಿ ಚೂರಿಯಿಂದ ತಿವಿದು ಮಗನ ಕೈಯಲ್ಲಿದ್ದ ಒಂದು ಕೆ.ಜಿ.ಗೂ ಅಧಿಕ ಚಿನ್ನಾಭರಣಗಳ ಚೀಲವನ್ನು ಎಗರಿಸಿ ಪರಾರಿಯಾಗಲು ಯತ್ನಿಸಿದ ಆರೋಪಿಗಳಲ್ಲಿ ನಾಲ್ವರನ್ನು ಬಂಧಿಸುವಲ್ಲಿ ಬೈಂದೂರು ಪೊಲೀಶರು ಯಶಸ್ವಿಯಾಗಿದ್ದಾರೆ.

ಹೆದ್ದಾರಿಯ ಸಮೀಪ ಗದ್ದೆಯಲ್ಲಿ ಸಾಗುತ್ತಿದ ಮೂವರ ಮೇಲೆ ಕತ್ತಲಲ್ಲಿ ಅಡಗಿ ಕುಳಿತಿದ್ದ ಐದು ಮಂದಿಯ ತಂಡ ಏಕಾಏಕಿ ಮೆಣಸಿನ ಪುಡಿ ಎರಚಿತ್ತಲ್ಲದೇ ಚೂರಿಯಿಂದ ಗಣೇಶ್‌ ಮತ್ತು ಸುಧೀಂದ್ರ ಅವರ ಮೇಲೆ ಎರಗಿದ್ದರು. ಈ ಸಮಯದಲ್ಲಿ ಇವರ ಕೂಗಾಟ ಕೇಳಿ ಓಡಿ ಬಂದಿದ್ದ ನೆರೆಮನೆಯ ಸುನೀಲ್‌ ಅವರ ಮೇಲೆ ಆರೋಪಿಗಳು ಚೂರಿಯಿಂದ ಇರಿದಿದ್ದರು. ಸುಧೀಂದ್ರ ಶೇಟ್‌ರ ಬಳಿಯಲ್ಲಿದ್ದ ಸುಮಾರು 12ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ಹೊಂದಿದ್ದ ಚೀಲವನ್ನು ದರೋಡೆ ಮಾಡಿ ಪರಾರಿಯಾಗಿದ್ದರು.

ಮಾಹಿತಿ ತಿಳಿದು ಆರೋಪಿಗಳನ್ನು ಬೆನ್ನತ್ತಿದ ಪೋಲಿಸರು ಐವರು ಆರೋಪಿಗಳಲ್ಲಿ ಮೂವರನ್ನು ನಾವುಂದ ಮಸ್ಕಿ ಬಳಿ ಬಂಧಿಸಿದ್ದು, ಓರ್ವನನ್ನು ಉಡುಪಿಯಲ್ಲಿ ಬಂಧಿಸಲಾಗಿದೆ. ಪ್ರಮುಖ ಆರೋಪಿ ರವಿ ಜತ್ತನ್ನ ತಲೆಮರೆಸಿಕೊಂಡಿದ್ದಾನೆ. ಬಂಧಿತರನ್ನು ರಿಪ್ಪನ್‌ಪೇಟೆಯ ಶಿವ ಪ್ರಕಾಶ್‌, ನಿಟ್ಟೂರಿನ ದುರ್ಗಾಪ್ರಸಾದ್‌ ಶೆಟ್ಟಿ , ಉದ್ಯಾವರದ ಚಂದ್ರಹಾಸ್‌ ಹಾಗೂ ಕಾರ್ಕಳದ ಪ್ರದೀಪ್‌ ಎಂದು ಗುರುತಿಸಲಾಗಿದೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com