ಕುಂದಾಪುರ: ಬಿದ್ಕಲ್ಕಟ್ಟೆಯ ಸರಕಾರಿ ಪ.ಪೂ. ಕಾಲೇಜಿನ ಪಕ್ಕದಲ್ಲಿರುವ ನಾಲ್ಕೂರು ರಸ್ತೆಯ ಪಕ್ಕದಲ್ಲಿನ ಸುಗೋಡಿ ಎಂಬಲ್ಲಿನ ಗೇರು ಹಾಡಿಯೊಂದರಲ್ಲಿ ಲಕ್ಷ್ಮಿ ಯಾನೆ ಸೀತಾ ಕುಲಾಲ್ತಿ (62) ಅವರ ರಕ್ತಸಿಕ್ತ ಸ್ಥಿತಿಯಲ್ಲಿ ಶವ ಮಂಗಳವಾರ ಬೆಳಿಗ್ಗೆ ಪತ್ತೆಯಾಗಿದ್ದು, ಇದು ಕೊಲೆಯೇ ಅಥವಾ ಚಿರತೆಯೊಂದ ಆದ ದಾಳಿಯೇ ಎನ್ನುವ ಕುರಿತು ಶಂಕೆ ಉಂಟಾಗಿದೆ.
ನಾಲ್ಕೂರು ಗ್ರಾಮದ ಜಡ್ಡಿನಮನೆ ನಿವಾಸಿ ಲಕ್ಷ್ಮಿ ಯಾನೆ ಸೀತು ಕುಲಾಲ್ತಿ ಅವರು ಕೂಲಿ ಕೆಲಸ ಮಾಡಿಕೊಂಡಿದ್ದು, ಮಂಗಳವಾರ ಬೆಳಗ್ಗೆ ಬೇಗನೆ ಮನೆಯಿಂದ ಹೊರಟವರು ಬಿದ್ಕಲ್ಕಟ್ಟೆಯ ಹೊಂಬಾಡಿ ಸಂಘವೊಂದರ ಸುವಿಧಾ ಸಂಗ್ರಹಣಾ ಕೇಂದ್ರಕ್ಕೆ ಆಟೋ ರಿಕ್ಷಾದಲ್ಲಿ ತೆರಳಿದವರು ಬೆಳಗ್ಗೆ ಉಳಿತಾಯ ನಿಧಿಗೆ ಹಣವನ್ನು ಕಟ್ಟಿ ವಾಪಾಸಾಗಿದ್ದರು ಎನ್ನಲಾಗಿದೆ.
ನಾಲ್ಕೂರಿನ ಮನೆಗೆ ಹೋಗಲು ಬಿದ್ಕಲ್ಕಟ್ಟೆ ಬಸ್ಸು ನಿಲ್ದಾಣದಿಂದ ಇಲ್ಲಿನ ಪ.ಪೂ.ಕಾಲೇಜಿನ ಪಕ್ಕದಲ್ಲಿರುವ ಮಣ್ಣು ರಸ್ತೆಯಲ್ಲಿ ಸುಮಾರು 1 ಕಿ.ಮೀ ಕ್ರಮಿಸಿದರೆ ಆಕೆಯ ಮನೆ ತಲುಪಬಹುದು. ಬೆಳಗ್ಗೆ ಸುಮಾರು 9.45 ರ ವೇಳೆಯಲ್ಲಿ ಇದೆ ದಾರಿಯಲ್ಲಿ ಸ್ವಲ್ಪ ದೂರ ಸಾಗಿದ ಮೇಲೆ ಪ.ಪೂ.ಕಾಲೇಜಿನ ಪಕ್ಕದಲ್ಲಿ ಬರುವ ಗೇರು ಹಾಡಿಯೊಂದಕ್ಕೆ ಸೊಪ್ಪು ಕೊಯ್ಯಲು ಬಂದಿದ್ದ ಸ್ಥಳೀಯರು ಆಕೆಯ ರಕ್ತಸಿಕ್ತ ಶವವನ್ನು ನೋಡಿ ಗಾಭರಿಗೊಂಡು ಸ್ಥಳೀಯರಿಗೆ ಮಾಹಿತಿ ತಿಳಿಸಿದ್ದಾರೆ. ಮಾಹಿತಿ ಪಡೆದ ಕೋಟ ಪೊಲೀಸರು ಸ್ಥಳಕ್ಕೆ ಬಂದಿದ್ದಾರೆ..