ಬ್ರಹ್ಮಾವರ: ವರದಕ್ಷಿಣೆಗಾಗಿ ಹಿಂಸೆ ನೀಡುತ್ತಿದ್ದಾರೆ ಎಂದು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಂಡ್ಸೆಯ ರಾಜು ಪೂಜಾರಿ ಎಂಬಾತ ನಾಲ್ಕು ವರ್ಷಗಳ ಹಿಂದೆ ಶೋಭಾ ಪೂಜಾರಿಯನ್ನು ಮದುವೆಯಾಗಿದ್ದ. ಮದುವೆ ಸಂದರ್ಭದಲ್ಲಿ ಒಂದು ಲಕ್ಷ ರೂ. ನಗದು ಮತ್ತು 10 ಪವನ್ ಚಿನ್ನ ವರದಕ್ಷಿಣೆಯಾಗಿ ಪಡೆದಿದ್ದ. ಮದುವೆ ಬಳಿಕ ಮುಂಬಯಿಗೆ ಕರೆದುಕೊಂಡು ಹೋಗಿದ್ದು ಬಾಡಿಗೆ ಮನೆಯಲ್ಲಿ ದಂಪತಿ ವಾಸವಾಗಿದ್ದರು. ಈ ಸಂದರ್ಭ ಮತ್ತಷ್ಟು ವರದಕ್ಷಿಣೆ ತರುವಂತೆ ಒತ್ತಾಯಿಸಿ ಹಿಂಸೆ ನೀಡಿದ್ದಲ್ಲದೆ ಮೂರು ವರ್ಷಗಳ ಹಿಂದೆ ತಾಯಿ ಮನೆಗೆ ಬಿಟ್ಟು ಹೋಗಿದ್ದ. ಆನಂತರ ರಾಜು ಪೂಜಾರಿ ತನ್ನ ವಂಡ್ಸೆಯ ಮನೆಗೆ ಬಂದಾಗ ಶೋಭಾ ಅಲ್ಲಿಗೆ ಹೋಗಿದ್ದು, ಅಲ್ಲಿ ಅವಾಚ್ಯವಾಗಿ ಬೈದಿದ್ದಾರೆ ಎಂದು ಶೋಭಾ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕುಂಜಿಬೆಟ್ಟು ಲಕ್ಷ್ಮೀಂದ್ರನಗರ ಅಂಬಿಕಾ ನಾಯಕ್ ತನ್ನ ಪತಿ ವಿರುದ್ಧ ವರದಕ್ಷಿಣೆಗಾಗಿ ಹಿಂಸೆ ನೀಡಿರುವ ಪ್ರಕರಣ ದಾಖಲಿಸಿದ್ದಾರೆ.