ವಿದ್ಯಾರ್ಥಿನಿ ಗರ್ಭಿಣಿ: ಕೆರಾಡಿಯ ಗಣೇಶ್‌ನ ಬಂಧನ

ಕುಂದಾಪುರ: ಕಾಲೇಜು ವಿದ್ಯಾರ್ಥಿನಿಯೊಬ್ಬಳನ್ನು ಪ್ರೀತಿಸುವ ನಾಟಕವಾಡಿ ದೈಹಿಕ ಸಂಪರ್ಕ ಬೆಳೆಸಿ ಗರ್ಭಿಣಿಯಾಗುವಂತೆ ಮಾಡಿದ ಆರೋಪದಲ್ಲಿ ಕುಂದಾಪುರದ ಮಹಿಳಾ ಠಾಣೆ ಪೊಲೀಸರು ಕೆರಾಡಿಯ ಗಣೇಶ್‌ನನ್ನು ಬಂಧಿಸಿದ್ದಾರೆ. 

ಹಟ್ಟಿಯಂಗಡಿಯ ಯುವತಿಗೆ ಕುಂದಾಪುರದ ಕಾಲೇಜಿನಲ್ಲಿ ಓದುತ್ತಿರುವ ವೇಳೆ ಕೆರಾಡಿ ಗಣೇಶನ ಪರಿಚಯವಾಗಿ ಸ್ನೇಹವಾಗಿ ಪ್ರೀತಿಗೆ ತಿರುಗಿತ್ತು. ಮದುವೆಯಾಗುವುದಾಗಿ ಹೇಳಿ ಆತ ದೈಹಿಕ ಸಂಪರ್ಕ ಬೆಳೆಸಿ ಬಳಿಕ ಬೆಂಗಳೂರಿಗೆ ಹೋಗಿದ್ದ. ಗರ್ಭಿಣಿಯಾದ ವಿಷಯ ತಿಳಿಸಿದಾಗ ಬೆಂಗಳೂರಿಗೆ ಬರುವಂತೆ ಹೇಳಿ ತಪ್ಪಿಸಿಕೊಂಡಿದ್ದ. ನಾನು ಅಲ್ಲಿ ಮನೆ ಕೆಲಸಕ್ಕೆ ಸೇರಿಕೊಂಡು ನಂತರ ಊರಿಗೆ ಮರಳಿದ್ದೆ. ಇದೀಗ ತಾನು 8 ತಿಂಗಳ ಗರ್ಭಿಣಿಯಾಗಿದ್ದು ಪ್ರಿಯಕರ ಗಣೇಶ್ ನಾಪತ್ತೆಯಾಗಿದ್ದಾನೆ. ಪ್ರೀತಿಯ ಹೆಸರಿನಲ್ಲಿ ನಂಬಿಸಿ ಅತ್ಯಾಚಾರ ಎಸಗಿದ್ದಾನೆ ಎಂದು ಯುವತಿ ತನ್ನ ದೂರಿನಲ್ಲಿ ತಿಳಿಸಿದ್ದಾರೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com