ದೇಶದ್ರೋಹದ ಆರೋಪ: ಕಾಲೇಜು ವಿದ್ಯಾರ್ಥಿಗೆ ಜಾಮೀನು

ಕುಂದಾಪುರ: ಕುಮಟಾದ ಕಾಲೇಜಿನ ಮೂರನೇ ಬಿ.ಕಾಂ ವಿದ್ಯಾರ್ಥಿಯಾಗಿದ್ದು, ರಾಷ್ಟ್ರದ್ರೋಹ ಹಾಗೂ ಒಳಸಂಚು, ರಾಷ್ಟ್ರಗೀತೆಗೆ ಅವಮಾನ ಹಾಗೂ ರಾಷ್ಟ್ರದ ವಿರುದ್ಧ ಕೀಳು ಪದದ ಪ್ರಯೋಗ ಇತ್ಯಾದಿ ಆರೋಗಳಿಗಾಗಿ ಕುಮಟಾದ ಪೊಲೀಸರಿಂದ ಬಂಧಿತನಾದ 19ವರ್ಷ ಪ್ರಾಯದ ಜಬೀರ್‌ಖಾನ್‌ನಿಗೆ ಕಾರವಾರದ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಶರ್ತಬದ್ಧ ಜಾಮೀನು ನೀಡಿದೆ.

ಆರೋಪಿಯು ಆ.15ರಂದು ಸ್ವಾತಂತ್ರ್ಯ ದಿನಾಚರಣೆಯ ದಿನ ವಿಡಿಯೋ ಹಾಗೂ ಎಸ್‌.ಎಂ.ಎಸ್‌. ಕಳುಹಿಸಿ ಅಪರಾಧ ಮಾಡಿರುವುದಾಗಿ ಆತನ ಸಹಪಾಠಿ ರಕ್ಷಿತ್‌ ಜೋಗಿ ದೂರು ನೀಡಿದ್ದರು. ಕುಮಟಾದ ಪರಿಸರದಲ್ಲಿ ಭೀತಿ ವಾತಾವರಣ ಸೃಷ್ಟಿಸಿದ ಹಾಗೂ ರಾಷ್ಟ್ರದ ಗಮನ ಸೆಳೆದ ಈ ಪ್ರಕರಣದಲ್ಲಿ ಆರೋಪಿ ಪರವಾಗಿ ವಕಾಲತ್ತು ನಡೆಸಲು ಕುಮಟಾ ವಕೀಲರ ಸಂಘ ಹಿಂದೇಟು ಹಾಕಿತ್ತು. ಆರೋಪಿಯು ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದು, ಭಯೋತ್ಪಾದಕನಲ್ಲ ಹಾಗೂ ಆತನಿಂದ ದೊಡ್ಡ ಅಪರಾಧ ಘಟಿಸುವ ಸಾಧ್ಯತೆ ಇಲ್ಲ ಎಂದು ಆರೋಪಿಯ ಪರ ವಾದ ಮಂಡಿಸಲಾಗಿತ್ತು. ಕಾರವಾರದ ಜಿಲ್ಲಾ ಹಾಗೂ ಸೆಷನ್ಸ್‌ ನ್ಯಾಯಾಧೀಶ ಡಿ8. ರಂದು ಜಾಮೀನು ಆದೇಶಿಸಿದ ಈ ಪ್ರಕರಣದಲ್ಲಿ ಆರೋಪಿ ಪರವಾಗಿ ಕುಂದಾಪುರದ ನ್ಯಾಯವಾದಿ ರವಿಕಿರಣ್‌ ಮುರ್ಡೇಶ್ವರ ವಾದಿಸಿದ್ದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com