ಕುಂದಾಪುರ: ಬಸ್ಸನ್ನು ಇಳಿಯುವಾಗ ಬಾಕಿ ಚಿಲ್ಲರೆಯನ್ನು ತಡವಾಗಿ ನೀಡಿದ ಬಗ್ಗೆ ಕೋಪಗೊಂಡ ಪ್ರಯಾಣಿಕನೋರ್ವ ಇತರ ಜನರನ್ನು ಕೂಡಿಕೊಂಡು ಉಪ್ಪುಂದ ಬಸ್ಸು ನಿಲ್ದಾಣದಲ್ಲಿ ಬಸ್ಸನ್ನು ಅಡ್ಡ ಗಟ್ಟಿ ನಿರ್ವಾಹಕರ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ ಘಟನೆ ನಡೆದಿದೆ.
ಭಟ್ಕಳದಿಂದ ಪ್ರಯಾಣಿಕರನ್ನು ಹತ್ತಿಸಿಕೊಂಡು ಕುಂದಾಪುರಕ್ಕೆ ಹೊರಟಿದ್ದ ರಾಜ್ಯ ಸರಕಾರಿ ಬಸ್ಸು ಕುಂದಾಪುರ ಹಳೇ ಬಸ್ಸು ನಿಲ್ದಾಣದಲ್ಲಿ ಪ್ರಯಾಣಿಕರನ್ನು ಇಳಿಸಿಇ ಚಿಲ್ಲರೆ ನೀಡುತ್ತಿರುವಾಗ ಉಪ್ಪುಂದದ ನಿವಾಸಿ ಗೋವಿಂದ ಪೂಜಾರಿ ಬೈದು ಗಲಾಟೆ ನಡೆಸಿದ್ದಲ್ಲದೇ ಉಪ್ಪುಂದದಲ್ಲಿ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾನೆ ಎಂದು ಬಸ್ಸಿನ ನಿರ್ವಾಹಕ ಪ್ರಮೋದ್ ಹಡಗಲಿ ಬೈಂದೂರು ಠಾಣೆಯಲ್ಲಿ ದೂರು ನೀಡಿದ್ದಾರೆ.