ಕುಂದಾಪುರ: ಇಲ್ಲಿನ ಗಂಗೊಳ್ಳಿಯ ಬಾವಿಕಟ್ಟೆ ಎಂಬಲ್ಲಿ ವ್ಯಕ್ತಿಯೊಬ್ಬರು ಅನುಮಾನಾಸ್ಪದಾವಾಗಿ ಸಾವನ್ನಪ್ಪಿರುವ ಘಟನೆ ಶುಕ್ರವಾರ ಬೆಳಕಿಗೆ ಬಂದಿದೆ.
ಮೃತ ವ್ಯಕ್ತಿಯನ್ನು ಬಾವಿಕಟ್ಟೆ ನಿವಾಸಿ ಶೇಖರ್ (38) ಎಂದು ತಿಳಿದು ಬಂದಿದ್ದು, ಕೊಲೆ ಗೈಯಲಾಗಿದೆ ಎಂದು ಶಂಕಿರಸಲಾಗಿದೆ.
ಶೇಖರ್ ಕೂಲಿ ಕಾರ್ಮಿಕನಾಗಿದ್ದು ಇಬ್ಬರು ಪತ್ನಿಯರನ್ನು ಹೊಂದಿದ್ದಾನೆ ಎಂದು ಹೇಳಲಾಗಿದೆ. ಮೊದಲ ಪತ್ನಿ ಹಾಗೂ ಓರ್ವ ಪುತ್ರ ಇಬ್ಬರು ಪುತ್ರಿಯರಿಂದ ಪರಿತ್ಯಕ್ತನಾಗಿದ್ದ ಶೇಖರ್ ಕಲ್ಪನಾ ಎನ್ನವವರೊಂದಿಗೆ ಎರಡನೇ ವಿವಾಹವಾಗಿದ್ದ ಎಂದು ತಿಳಿದು ಬಂದಿದೆ.
ಕಲ್ಪನಾ ಅವರಿಗೆ ಇಬ್ಬರು ಪುತ್ರರು ಮತ್ತು ಓರ್ವ ಪುತ್ರಿ ಇದ್ದಾಳೆ .
ಶೇಖರ್ ಅವರು ಕಂಠ ಪೂರ್ತಿ ಕುಡಿದು ಮನೆಗೆ ಬಂದ ವೇಳೆ ಕಲ್ಪನಾ ಅವರೊಂದಿಗೆ ಜಗಳವಾಡಿದ್ದಾರೆ ಎಂದು ಹೇಳಲಾಗಿದೆ ಘಟನೆ ಸಂಬಂಧ ಪೊಲೀಸರು ಪುತ್ರ ಜಯಸೂರ್ಯನನ್ನು ತೀವ್ರ ವಿಚಾರಣೆ ನಡೆಸಿದ್ದಾರೆ ಎಂದು ತಿಳಿದು ಮಂದಿದೆ. ಗಂಗೊಳ್ಳಿ ಪೊಲೀಸರು ಸ್ಥಳಕ್ಕಾಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.