ಗಂಗೊಳ್ಳಿ ಅಳಿವೆಯಲ್ಲಿ ಮಗುಚಿದ ದೋಣಿ: 7 ಮೀನುಗಾರರ ರಕ್ಷಣೆ

ಗಂಗೊಳ್ಳಿ: ಮೀನುಗಾರಿಕೆಯಿಂದ ಮರಳುತ್ತಿದ್ದ ಯಾಂತ್ರೀಕತ ನಾಡದೋಣಿಯೊಂದು ಬುಧವಾರ ಅಪರಾಹ್ನ ಗಂಗೊಳ್ಳಿ ಅಳಿವೆಯಲ್ಲಿ ಅಲೆಯ ಅಬ್ಬರಕ್ಕೆ ಸಿಲುಕಿ ಮಗುಚಿದ್ದು, ದೋಣಿಯಲ್ಲಿದ್ದ 7 ಮಂದಿಯನ್ನು ಹಿಂದಿನಿಂದ ಬರುತ್ತಿದ್ದ ದೋಣಿಯವರು ರಕ್ಷಿಸಿದ್ದಾರೆ. 
    ಗಂಗೊಳ್ಳಿ ಲೈಟ್‌ಹೌಸ್‌ನ ಸುಭಾಶ್ ಖಾರ್ವಿಯವರಿಗೆ ಸೇರಿದ ದೇವಿಪ್ರಸಾದ್ ಹೆಸರಿನ ನಾಡದೋಣಿ ಮಗುಚಿದ್ದು, ಅವರಿಗೇ ಸೇರಿದ ಇನ್ನೊಂದು ದೋಣಿ ಹಿಂದೆ ಇದ್ದುದರಿಂದ ಏಳು ಮಂದಿಯ ಪ್ರಾಣ ಉಳಿದಿದೆ. 
    ಗಂಗೊಳ್ಳಿ ಲೈಟ್‌ಹೌಸ್ ಪರಿಸರದ ಸುಭಾಶ್ ಖಾರ್ವಿ(24), ಸುರೇಶ್ ಖಾರ್ವಿ(40), ರಾಘವೇಂದ್ರ ಖಾರ್ವಿ(34), ದಿನೇಶ್ ಖಾರ್ವಿ(21), ಪ್ರಕಾಶ್ ಖಾರ್ವಿ(20), ದಾಸ ಖಾರ್ವಿ(28) ಮತ್ತು ಗೋವಿಂದ ಖಾರ್ವಿ(35) ಅಳಿವೆಯಲ್ಲಿ ಮಗುಚಿದ ದೋಣಿಯಲ್ಲಿದ್ದರು. ಸಮುದ್ರಕ್ಕೆ ಬಿದ್ದ ಅವರು ದೋಣಿ, ಎಣ್ಣೆ ಕ್ಯಾನು ಹಿಡಿದುಕೊಂಡು ಜೀವ ಉಳಿಸಿಕೊಳ್ಳಲು ಹೋರಾಟ ನಡೆಸುತ್ತಿದ್ದಾಗ ಹಿಂದಿನ ದೋಣಿಯಲ್ಲಿದ್ದವರಿಗೆ ತಿಳಿಯಿತು. ಅದರಲ್ಲಿದ್ದ ಹತ್ತು ಮಂದಿ ಈ ಮೀನುಗಾರರನ್ನು ಹರಸಾಹಸಪಟ್ಟು ರಕ್ಷಿಸಿ ಸುರಕ್ಷಿತವಾಗಿ ದಡ ತಲುಪಿಸಿದ್ದಾರೆ. ದೋಣಿಯಲ್ಲಿದ್ದ 2 ಲಕ್ಷ ರೂ. ಮೌಲ್ಯದ ಮೀನು ಸಮುದ್ರಪಾಲಾಗಿದೆ. ದೋಣಿ ಮತ್ತು ಅದರಲ್ಲಿದ್ದ ಸಾಮಗ್ರಿಗಳು ಕೊಚ್ಚಿಹೋಗಿವೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com