ಕುಂದಾಪುರ: ಕೊಲ್ಲೂರು ಬಳಿಯ ಜಡ್ಕಲ್ನ ಕಾಡಿನಲ್ಲಿ ಮಗು ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸಾಗರದ ಶಶಿಕಾಂತ್ನನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.
ಕಳೆದ ಶುಕ್ರವಾರ ಕಾಡಿನಲ್ಲಿ ಮಗು ಪತ್ತೆಯಾದ ಬಗ್ಗೆ ಹೆಮ್ಮಾಡಿಯ ಕಾರು ಚಾಲಕ ಗಣೇಶ್ ದೇವಾಡಿಗ ಅವರು ಕುಂದಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದದ್ದರು. ಅದೇ ವೇಳೆ ಈ ಮಗುವಿಗೆ ಜನ್ಮ ನೀಡಿದ ಅಪ್ರಾಪ್ತ ವಯಸ್ಸಿನ ಹುಡುಗಿ ಆಸ್ಪತ್ರೆಗೆ ದಾಖಲಾಗಿದ್ದಳು. ಮದುವೆಯಾಗದೇ ಮಗುವಿಗೆ ಜನ್ಮನೀಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಯನ್ನು ಆರಂಭಿಸಿದ ಪೊಲೀಸರು ಶಶಿಕಾಂತ್ನನ್ನು ವಶಕ್ಕೆ ಪಡೆದಿರುತ್ತಾರೆ. ಆರೋಪಿ ಹುಡುಗಿಯ ಹತ್ತಿರದ ಸಂಬಂಧಿಯಾಗಿದ್ದು, ಮದುವೆಗೆ ವಿರೋಧವಿರುವುದರಿಂದ ಮದುವೆಯ ಮೊದಲೇ ದೈಹಿಕ ಸಂಪರ್ಕ ಹೊಂದಿದ್ದನು ಎಂದು ತನಿಖೆಯಲ್ಲಿ ತಿಳಿದುಬಂದಿದೆ.