ಕೊಲ್ಲೂರು: ಶಾರ್ಕೆ ಬಳಿ ಆ.2ರಂದು ಮಧ್ಯಾಹ್ನ ನಡೆದ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಗಂಭೀರ ಗಾಯಗೊಂಡು ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದಾರೆ. ಖಾಸಗಿ ಬಸ್ ಹಾಗೂ 2 ಬೈಕ್ಗಳು ಪರಸ್ಪರ ಢಿಕ್ಕಿ ಹೊಡೆದ ಪರಿಣಾಮ ಬೈಕ್ಗಳಲ್ಲಿದ್ದ ಬೆಂಗಳೂರಿನ ನಾಲ್ವರು ಸಾಫ್ಟವೇರ್ ಎಂಜಿನೀಯರ್ಗಳಲ್ಲಿ ಒಬ್ಬರಾದ ನಿತಿನ್ ಶೆಟ್ಟಿ (24) ಗಂಭೀರ ಗಾಯಗೊಂಡು ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇತರ ಮೂವರು ಸಣ್ಣ ಪುಟ್ಟ ಗಾಯಗೊಂಡಿಡದ್ದಾರೆ. ಕೊಲ್ಲೂರು ಎಸ್.ಐ. ಜಯಂತ್ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.