ಕುಂದಾಪುರ: ಗರ್ಭಿಣಿ ಮಹಿಳೆಯೋರ್ವರು ಪ್ರಸವದ ಸಮಯದಲ್ಲಿ ಮಗುವನ್ನು ಕಾಡಿನಲ್ಲಿ ಎಸೆದು ಆ ಸ್ಥಳದಿಂದ ಕಾಲು ಕಿತ್ತಿದ್ದರೂ, ಆ ಮಗು ಮಳೆ ಗಾಳಿಯ ನಡುವೆ ಸುಮಾರು 20ಕ್ಕೂ ಅಧಿಕ ಗಂಟೆಗಳ ಕಾಲ ಕಳೆದರೂ ಸುರಿಯುವ ಮಳೆಯಲ್ಲಿಯೇ ಸುಮಾರು 30 ಗಂಟೆಗಳ ಕಾಲ ಕಳೆದು ರಕ್ಷಕರಿಂದಾಗಿ ಮಗುವಿನ ಜೀವ ಉಳಿದಿರುವ ಘಟನೆ ಕೊಲ್ಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜನ್ನಾಲು ಎಂಬಲ್ಲಿ ಸಂಭವಿಸಿದೆ.
ಹಟ್ಟಿಯಂಗಡಿ ಗ್ರಾ.ಪಂ. ವ್ಯಾಪ್ತಿಯ ಕನ್ಯಾನ ಗುಡ್ಡೆಯಂಗಡಿ ಕೂಡ್ಲು ಪರಿಸರದ ಯುವತಿಯೊಬ್ಬಳು ಅಪ್ರಾಪ್ತ ವಯಸ್ಸಿನಲ್ಲಿ ಗರ್ಭವತಿಯಾಗಿರುವುದರ ಮಾಹಿತಿ ಪಡೆದುಕೊಂಡಿದ್ದ ಸ್ಥಳೀಯರು ಗುರುವಾರ ಊರಿನಿಂದ ಹೊರಕ್ಕೆ ಹೋಗಿ ಬಂದ ಬಳಿಕ ಆಕೆಯ ಹೊಟ್ಟೆ ಸಣ್ಣಗಾಗಿರುವುದನ್ನು ಗಮನಿಸಿ ಸ್ಥಳೀಯ ಪತ್ರಕರ್ತರ ಗಮನಕ್ಕೆ ತಂದಿದ್ದಾರೆ. ಸ್ಥಳೀಯರ ಮಾಹಿತಿಯ ಆಧಾರದಲ್ಲಿ ವಿಚಾರಣೆಗೆ ಮುಂದಾದ ಪತ್ರಕರ್ತರು ತಲ್ಲೂರಿನ ಮಾರುತಿ ಆಮ್ನಿಯ ಚಾಲಕ ಗಣೇಶ ದೇವಾಡಿಗ ಎನ್ನುವವÃನ್ನು ವಿಚಾರಿಸಿದಾಗ ಪ್ರಕರಣದ ಕುರಿತಂತೆ ಒಂದಷ್ಟು ಮಾಹಿತಿಗಳು ದೊರೆಕಿತ್ತು. ಸಾಗರಕ್ಕೆಂದು ಬಾಡಿಗೆ ವಾಹನದಲ್ಲಿ ತೆರಳಿದ್ದ ತಾಯಿ ಹಾಗೂ ಮಗಳು ಜನ್ನಾಲು ಸಮೀಪದ ಮೂತ್ರ ವಿಸರ್ಜನೆಗೆಂದು ತೆರಳಿದ್ದವರು ಸುಮಾರು 20 ನಿಮಿಷದ ಬಳಿಕ ಮರಳಿ ಬಂದು ಸಾಗರಕ್ಕೆ ಹೋಗುವುದು ಬೇಡ ಹಿಂತಿರುಗಿ ತಲ್ಲೂರಿಗೆ ತೆರಳುವಂತೆ ಸೂಚಿಸಿರುವುದಾಗಿ ಚಾಲಕ ವಿವರಿಸಿದ್ದಾನೆ.
ಈ ಸಮಯದಲ್ಲಿ ಪತ್ರಕರ್ತರು ಕುಂದಾಪುರದ ಸರ್ಕಲ್ ಇನ್ಸ್ಪೆಕ್ಟರ್ಗೆ ಮಾಹಿತಿ ನೀಡಿ ಚಾಲಕನನ್ನು ಕರೆದುಕೊಂಡು ಮೂತ್ರ ವಿಸರ್ಜನೆಗೆಂದು ಹೋದ ಕಾಡಿನ ಪ್ರದೇಶಗಳನ್ನು ಪರಿಶೀಲಿಸಿದಾಗ ದುರ್ಗಮವಾದ ಕಾಡಿನಲ್ಲಿ ಅಳುತ್ತಿದ್ದ ಮಗುವೊಂದು ಪತ್ತೆಯಾಗಿರುತ್ತದೆ. ಈ ಬಗ್ಗೆ ವೃತ್ತ ನೀರಿಕ್ಷಕ ದಿವಾಕರ್ ಅವರಿಗೆ ಮಾಹಿತಿ ನೀಡಿದಾಗ ಮಾನವೀಯತೆ ತೋರಿದ್ದ ಅವರು ಮಗುವನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲು ಕ್ರಮ ಕೈಗೊಂಡರು.
ಚಾಲಕನ ದೂರನ್ನು ದಾಖಲಿಸಿಕೊಂಡಿರುವ ಕುಂದಾಪುರದ ಪೊಲೀಸರು ಪ್ರಕರಣದ ಸಮಗ್ರ ತನಿಖೆಗೆ ಮುಂದಾಗಿದ್ದಾರೆ. ಅನಾಥ ಮಗುವಿನ ತಾಯಿ ಎಂದು ಹೇಳಲಾಗುತ್ತಿರುವ ಯುವತಿ ಹಾಗೂ ಆಕೆಯ ತಾಯಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಶಂಕಿತ ಮಹಿಳೆ ಚಿಕಿತ್ಸೆಗಾಗಿ ಕುಂದಾಪುರದ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದು, ಎದೆ ಹಾಲಿಗಾಗಿ ಮಗುವನ್ನು ಸರಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಘಟನಾ ಸ್ಥಳಕ್ಕೆ ಕುಂದಾಪುರ ಉಪವಿಭಾಗದ ಡಿವೈಎಸ್ಪಿ ಸಿ.ಬಿ ಪಾಟೀಲ್ ಹಾಗೂ ತಹಸೀಲ್ದಾರ್ ಗಾಯತ್ರಿ ನಾಯಕ್ ತೆರಳಿ ಪರಿಶೀಲನೆ ನಡೆಸಿದ್ದಾರೆ.