ಹಕ್ಲಾಡಿ : ಗ್ರಾಮ ಪಂಚಾಯತ್ ವ್ಯಾಪ್ತಿಯ ಬಟ್ಟೆಕುದ್ರು ಸಾಲಬಾಗಿಲಿನಲ್ಲಿ ಬುಧವಾರ ಸುರಿದ ಭಾರೀ ಮಳೆ ಮತ್ತು ಬಲವಾಗಿ ಬೀಸಿದ ಗಾಳಿಗೆ ಭದ್ರ ಶ್ರೀಯಾನ್ ಅವರ ಮನೆ ಮೇಲೆ ತೆಂಗಿನಮರ ಬಿದ್ದು ಮನೆ ಮಾಡು ಭಾಗಶಃ ಜಖಂಗೊಂಡಿದೆ. ಸುಮಾರು 25,000 ರೂ. ನಷ್ಟ ಅಂದಾಜಿಸಲಾಗಿದೆ.
ವಿದ್ಯುತ್ ತಂತಿ ತುಂಡಾಗಿದ್ದು, ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಗ್ರಾ.ಪಂ. ಅಧ್ಯಕ್ಷ ಕೆ. ಕಿಶೋರ ಕುಮಾರ, ಪಿಡಿಒ ಮಧುಸೂದನ ಪ್ರಸಾದ್ ಹಾಗೂ ಗ್ರಾಮಕರಣಿಕರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.