ಕೋಟ: ಕಸಾಯಿಖಾನೆಗೆ ಅಕ್ರಮವಾಗಿ ಜಾನುವಾರನ್ನು ಸಾಗಾಟ ಮಾಡುತ್ತಿದ್ದ ವೇಳೆ ಪೊಲೀಸರು ವಾಹನವನ್ನು ತಡೆದು, ಜಾನುವಾರು ಹಾಗೂ ಇಬ್ಬರು ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡ ಘಟನೆ ಕೋಟ ಹೆ„ಸ್ಕೂಲ್ ಸಮೀಪ ಶುಕ್ರವಾರ ಅಪರಾಹ್ನ ನಡೆದಿದೆ.
ಬನ್ನಾಡಿಯಿಂದ ಕೋಟ ಹೆ„ಸ್ಕೂಲ್ ಮಾರ್ಗವಾಗಿ ಹೂಡೆಯ ಕಸಾಯಿಖಾನೆಗೆ ಜಾನುವಾರನ್ನು ಸಾಗಿಸುತ್ತಿದ್ದ ವೇಳೆ, ಗಸ್ತು ತಿರುಗುತ್ತಿದ್ದ ಸಹಾಯಕ ಪೊಲೀಸ್ ಉಪನೀರಿಕ್ಷಕ ಚಂದ್ರಕಾಂತ್ ಅಂಚನ ಹಾಗೂ ಪೇದೆ ರವೀಂದ್ರ ಅವರು ವಾಹನವನ್ನು ತಪಾಸಣೆ ನಡೆಸಿದ್ದು, ಈ ಸಂದರ್ಭ ಅಕ್ರಮವಾಗಿ ಗಂಡು ಕರುವೊಂದನ್ನು ಸಾಗಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ವಾಹನದ ಹಿಂದೆ ಕುಳಿತ ವ್ಯಕ್ತಿ ಪರಾರಿಯಾಗಿದ್ದು, ಚಾಲಕ ದಯಾನಂದ ಪೂಜಾರಿ ಹಾಗೂ ಸಂಜೀವ ಮರಕಾಲರನ್ನು ಬಂಧಿಧಿಸಲಾಗಿದೆ.
ಹರಿಕೆಗೆ ಬಿಟ್ಟ ಗಂಡು ಕರು ಇದಾಗಿದ್ದು, ಬನ್ನಾಡಿ ಹಾಗೂ ಕೋಟದ ಸುತ್ತಮುತ್ತ ಅನೇಕ ದಿನಗಳಿಂದ ತಿರುಗಾಡುತ್ತಿತ್ತು ಎಂದು ಸಾರ್ವಜನಿಕರು ತಿಳಿಸಿದ್ದಾರೆ.
ಈ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.