ಕುಂದಾಪುರ : ಶಿರಿಯಾರದ ಬಳಿ ಗಾಯಗೊಂಡು ಅಪಾಯಕ್ಕೆ ಸಿಲುಕಿದ್ದ ರಾಷ್ಟ್ರಪಕ್ಷಿ ನವಿಲನ್ನು ಸ್ಥಳೀಯ ಯುವಕರು ಹಿಡಿದು ಉಪಚರಿಸಿ ಅರಣ್ಯಾಧಿಕಾರಿಗಳಿಗೆ ಒಪ್ಪಿಸಿದರು.
ನವಿಲು ಗಾಯಗೊಂಡು ನಡೆಯಲು ಅಸಾಧ್ಯವಾದ ಪರಿಸ್ಥಿತಿಯಲ್ಲಿ ನಾಯಿ ಹಾಗೂ ಇತರ ಪ್ರಾಣಿಗಳ ಹಾವಳಿಗೆ ಸಿಗುವ ಮುನ್ನ ಸ್ಥಳೀಯರಾದ ರಮೇಶ್ ಆಚಾರ್, ಶ್ರೀಕಾಂತ್ ಕುಲಾಲ್,ಹರಿದಾಸ್ ಅವರು ಉಪಚರಿಸಿ ಅಧಿಕಾರಿಗಳಿಗೆ ಪಕ್ಷಿಯನ್ನು ಹಸ್ತಾಂತರಿಸಿದರು.
ಚಿತ್ರ : ದಿನೇಶ್ ಪುತ್ರನ್ ವಿಠಲವಾಡಿ