ಕುಂದಾಪುರ: ಕಳೆದೆರಡು ದಿನಗಳಿಂದ ಎಡೆಬಿಡದೆ ಸುರಿಯುತ್ತಿದ್ದ ಮಳೆ ಶನಿವಾರ ಸ್ವಲ್ಪ ವಿರಮಿಸಿದ್ದು, ತಗ್ಗು ಪ್ರದೇಶಗಳಲ್ಲಿ ನರೆ ಇಳಿಮುಖವಾಗಿದೆ. ನಾವುಂದ ಗ್ರಾಮದ ಸಾಲುºಡ, ಬಾಂಗ್, ಅರೆಹೊಳೆಯಲ್ಲಿ ಕೃಷಿಭೂಮಿಗಳು ಕೆಲವು ಪ್ರದೇಶಗಳು ಈಗಲೂ ಜಲಾವೃತವಾಗಿವೆ.
ಕುದ್ರು ಪ್ರದೇಶದಲ್ಲಿ ನೆರೆ ನೀರು ಕೊಂಚ ಇಳಿಮುಖಗೊಂಡಿದೆ. ನಾಡಾ ಗ್ರಾಮದ ಚಿಕ್ಕಳ್ಳಿಯಲ್ಲಿ ಹಲವು ಮನೆಗಳು ಇನ್ನೂ ಕೂಡಾ ಜಲಾವೃತಗೊಂಡಿದ್ದು, ಸಂಚಾರಕ್ಕಾಗಿ ತಮ್ಮ ದೋಣಿಗಳಲ್ಲಿ ತೆರಳುತ್ತಿದ್ದಾರೆ. ಬಡಾಕೆರೆ, ಕೋಣಿ, ಕೂಡ್ಗಿತ್ಲುವಿನಲ್ಲಿ ಕೃಷಿಭೂಮಿ ನೀರಿನಲ್ಲಿ ಮುಳುಗಿದೆ. ಸೇನಾಪುರ ಗ್ರಾಮದ ಗುಡ್ಡಮ್ಮಾಡಿ, ಪರಮಕಳಿ, ತೆಂಗಿನಗುಂಡಿ, ಹೊಸಾಡು ಗ್ರಾಮದ ಅರಾಟೆ, ಹಕ್ಲಾಡಿ ಗ್ರಾಮದ ಯಳೂರು, ತೊಪ್ಲು, ಬಟ್ಟೆಕುದ್ರು ಮೊದಲಾದೆಡೆ ಭತ್ತದ ಗದ್ದೆಗಳು ನೆರೆನೀರಿನಲ್ಲಿ ಮುಳುಗಿರುವುದು ಕಂಡುಬಂದಿದೆ. ಹಾಲಾಡಿಯಲ್ಲಿ ನೆರೆ ನೀರು ಇಳಿಮುಖಗೊಂಡು ಸಹಜ ಸ್ಥಿತಿಯತ್ತ ಸಾಗುತ್ತಿದೆ. ನಡುಗುಡ್ಡೆಯಾಗಿದ್ದ ಬಟ್ಟೆಕುದ್ರು, ಹಕ್ಲಾಡಿ , ಬಗ್ವಾಡಿ ಪ್ರದೇಶಗಳ ಏರಿದ ನೆರೆ ನೀರು ಸ್ವಲ್ಪಮಟ್ಟಿನಲ್ಲಿ ತಗ್ಗಿದೆ.