ನದಿಯಲ್ಲಿ ಕೊಚ್ಚಿಹೋಗಿ ಮೀನುಗಾರ ನಾಪತ್ತೆ

ಕುಂದಾಪುರ: ಹೊಸಾಡು ಗ್ರಾಮದ ಅರಾಟೆ ಹೊಳೆಯಲ್ಲಿ ದೋಣಿಯಲ್ಲಿ ತನ್ನ ಸಹೋದರರೊಂದಿಗೆ ಮೀನುಗಾರಿಕೆಗೆ ತೆರಳಿದ್ದ ಗುಜ್ಜಾಡಿ ಗ್ರಾಮದ ಕಂಚುಗೋಡು ನಿವಾಸಿ ನಾಗರಾಜ ಖಾರ್ವಿ (38) ನದಿಯಲ್ಲಿ ಕೊಚ್ಚಿ ಹೋಗಿ ನಾಪತ್ತೆಯಾಗಿದ್ದಾರೆ.

ಜು.30ರಂದು ಸಹೋದರರಾದ ಈಶ್ವರಖಾರ್ವಿ ಹಾಗೂ ಚಂದ್ರ ಖಾರ್ವಿಯವರೊಂದಿಗೆ ಅರಾಟೆ ಹೊಳೆಯಲ್ಲಿ ದೋಣಿಯಲ್ಲಿ ಮೀನು ಹಿಡಿಯುತ್ತಿರುವ ಸಮಯ ಜೋರಾಗಿ ಗಾಳಿ ಬೀಸಿದ್ದರಿಂದ ದೋಣಿ ಮಗುಚಿ ನೀರಿನಲ್ಲಿ ಮುಳುಗಿದಾಗ ಸಹೋದರ ಈಶ್ವರ ಖಾರ್ವಿ ಈಜಿಕೊಂಡು ಒಂದು ದಡವನ್ನು ಸೇರಿದ್ದು, ಆದರೆ ನಾಗರಾಜ ಖಾರ್ವಿ ದೋಣಿಯೊಂದಿಗೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದು ಈ ತನಕ ದಡಕ್ಕೆ ಬಾರದೇ ನಾಪತ್ತೆಯಾಗಿರುತ್ತಾರೆ ಎಂದು ಸಹೋದರ ಗಂಗೊಳ್ಳಿ ಠಾಣೆಯಲ್ಲಿ ದೂರು ನೀಡಿದ್ದಾರೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com