ಮಗಳ ಪ್ರಿಯಕರನ ಕೊಂದು, ಹೆಣ ಸಮೇತ್ ಠಾಣೆಗೆ ಶರಣಾದ ತಂದೆ

ಬೆಂಗಳೂರು: ಮಗಳನ್ನ ಪ್ರೀತಿಸುತ್ತಿದ್ದ ಯುವಕನನ್ನು ಬರ್ಬರವಾಗಿ ಕೊಲೆ ಮಾಡಿರುವ ತಂದೆ, ಮೃತ ದೇಹದ ಸಮೇತ್ ಪೊಲೀಸ್ ಠಾಣೆಗೆ ಬಂದು ಶರಣಾಗಿರುವ ಘಟನೆ ಗುರುವಾರ ನಡೆದಿದೆ.
ಕೆ.ಆರ್.ಪುರಂ ನಿವಾಸಿ ರಿಯಾಜ್ ಖಾನ್, ತನ್ನ ಮಗಳನ್ನು ಪ್ರೀತಿಸುತ್ತಿದ್ದ ಯುವಕ ಸಿದ್ದಿಕ್(25)ನನ್ನು ಬೆಂಗಳೂರಿನ ಬನ್ನೇರುಘಟ್ಟದಲ್ಲಿ ಕೊಲೆ ಮಾಡಿ, ಬಳಿಕ ಆತನ ಶವವನ್ನು ಮೂಟೆಕಟ್ಟಿ ಬೈಕ್ನಲ್ಲಿ ಕೆ.ಆರ್.ಪುರಂ ಪೊಲೀಸ್ ಠಾಣೆಗೆ ತಂದು ಪೊಲೀಸರಿಗೆ ಶರಣಾಗಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ರಿಯಾಜ್ ಖಾನ್ ವಿಚಾರಣೆ ನಡೆಸುತ್ತಿದ್ದಾರೆ.
ಸಾದಿಕ್ ಏಳನೇ ತರಗತಿ ಓದುತ್ತಿದ್ದ ಆರೋಪಿ ರಿಯಾಜ್ ಮಗಳನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ. ಕಳೆದ ಜುಲೈ 30ರಂದು ಪುತ್ರಿ ನಾಪತ್ತೆಯಾಗಿದ್ದು, ಈ ಸಂಬಂಧ ರಿಯಾಜ್ ಪೊಲೀಸರಿಗೆ ದೂರು ಸಹ ನೀಡಿದ್ದ ಎನ್ನಲಾಗಿದೆ. ಆದರೆ ಇದುವರೆಗೂ ರಿಯಾಜ್ ಪುತ್ರಿ ಪತ್ತೆಯಾಗಿಲ್ಲ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com