ಕುಂದಾಪುರ: ನಗರದ ಕಾಲೇಜು ರಸ್ತೆಯ ಬಳಿ ನಿಲ್ಲಿಸಿದ್ದ ಮಾರುತಿ 88 ಕಾರನ್ನು ತೆಗೆದುಕೊಂಡು ಹೋಗುವ ಸಮಯದಲ್ಲಿ ಅಕಸ್ಮಿಕವಾಗಿ ಶಾರ್ಟ್ಸರ್ಕ್ನೂಟ್ನಿಂದಾಗಿ ಬೆಂಕಿಕಾಣಿಸಿಕೊಂಡಿದ್ದು, ಸ್ಥಳೀಯರು ತಕ್ಷಣ ಬೆಂಕಿಯನ್ನು ಆರಿಸಿದ್ದರಿಂದ ಸಂಭವನೀಯ ದುರಂತವನ್ನು ತಪ್ಪಿಸಿದ ಘಟನೆ ಶುಕ್ರವಾರ ಸಂಜೆ ಸಂಭವಿಸಿದೆ.
ಕುಂದಾಪುರದ ಬರೆಕಟ್ಟು ನಿವಾಸಿ ಗಣೇಶ ಎನ್ನುವವರಿಗೆ ಸೇರಿದ ಕಾರು ಇದಾಗಿದ್ದು,ಕಾರಿನ ಹಿಂದುಗಡೆ ಗ್ಯಾಸ್ ಸಿಲೆಂಡರ್ ಇದ್ದು, ಬೆಂಕಿ ಹೊತ್ತಿಕೊಂಡಿದ್ದರೆ ಈ ಗ್ಯಾಸ್ ಸಿಲೆಂಡರ್ಗೆ ತಾಗಿ ಅಪಾಯ ಸಂಭವಿಸಲಿತ್ತು. ತಕ್ಷಣ ಕುಂದಾಪುರದ ಅಗ್ನಿಶಾಮಕದಳದವರು ಸ್ಥಳಕ್ಕೆ ಆಗಮಿಸಿ ಸಂಭವನೀಯ ಅಪಾಯವನ್ನು ತಡೆದಿದ್ದಾರೆ.