ಕುಂದಾಪುರ: ನಗರದ ಹೊರ ವಲಯದ ಹೇರಿಕುದ್ರು ಸೇತುವೆಯ ಬಳಿ ಸರಕು ತುಂಬಿದ ಲಾರಿಯೊಂದು ರಾ.ಹೆ.66ರ ಮಧ್ಯದಲ್ಲಿ ಕೆಟ್ಟುಹೋಗಿ ನಿಂತ ಪರಿಣಾಮ ಬೈಂದೂರು ಹಾಗೂ ಕುಂದಾಪುರದ ನಡುವೆ ಸುಮಾರು ನಾಲ್ಕು ಗಂಟೆಗಳ ಕಾಲ ಹೆದ್ದಾರಿ ಸಂಚಾರ ಅಸ್ತವ್ಯಸ್ಥಗೊಂಡಿತ್ತು.
ಸುಮಾರು 4 ಗಂಟೆಯ ಹೊತ್ತಿಗೆ ಲಾರಿ ಕೆಟ್ಟು ನಿಂತಿದ್ದು ಅನಂತರ ಸ್ಥಳಕ್ಕೆ ಆಗಮಿಸಿದ ಸಂಚಾರಿ ಪೊಲೀಸರು ಲಾರಿಯನ್ನು ಬದಿಗೆ ಸರಿಸುವ ಕಾರ್ಯವನ್ನು ನಡೆಸಿ ಎರಡೂ ಕಡೆಗಳಿಂದ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಕುಂದಾಪುರದಿಂದ ಬೈಂದೂರಿಗೆ ತೆರಳಬೇಕಾಗಿದ್ದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ತೊಂದರೆ ಅನುಭವಿಸಬೇಕಾಯಿತು. ಕುಂದಾಪುರದಿಂದ ಬೈಂದೂರಿನ ತನಕ ರಾ.ಹೆ. ತುಂಬಾ ಹಾಳಾಗಿದ್ದು ಪ್ರತಿದಿನವೂ ವಾಹನಗಳಿಗೆ ದುಃಸ್ವಪ್ನವಾಗಿ ಕಾಡುತ್ತಿದೆ. ಇದರಿಂದಾಗಿ ಮಳೆಯ ನಡುವೆ ಜನರು ಕಷ್ಠ ಅನುಭವಿಸಬೇಕಾಗಿದೆ.