ಕುಂದಾಪುರ: ಸಿಗರೇಟ್ ಖರೀದಿ ಮಾಡುವ ನೆಪದಲ್ಲಿ ಅಂಗಡಿಗೆ ಬಂದ ಇಬ್ಬರು ವ್ಯಕ್ತಿಗಳು ಚಾಕಾಲಿನಿಂದ ಅಂಗಡಿಯ ಮಾಲಿಕನ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಅಪಹರಿಸಿದ ಘಟನೆ ಕಾವ್ರಾಡಿ ಗ್ರಾಮದ ನೆಲ್ಲಿಕಟ್ಟೆ ಬಳಿ ಆ.8ರಂದು ಸಂಭವಿಸಿದೆ.
ಕಾವ್ರಾಡಿ ಗ್ರಾಮದ ನೆಲ್ಲಿಕಟ್ಟೆಯಲ್ಲಿರುವ ರಾಮ್ ರಾಯ್ ನಾಯಕ್ ಅವರ ಅಂಗಡಿಗೆ ಇಬ್ಬರು ವ್ಯಕ್ತಿಗಳು ಬೈಕ್ನಲ್ಲಿ ಬಂದು ಸಿಗರೇಟ್ನ್ನು ಕೇಳಿದ್ದು, ಅಂಗಡಿಯ ಡಬ್ಬದಿಂದ ಸಿಗರೇಟ್ನ್ನು ತೆಗೆದುಕೊಡುವ ವೇಳೆ ರಾಮ್ ರಾಯ್ ನಾಯಕ್ ಅವರ ಕುತ್ತಿಗೆಯಲ್ಲಿದ್ದ ಎರಡು ಪವನ್ ಚಿನ್ನದ ಸರವನ್ನು ಸೆಳೆದುಕೊಂಡು ಬೈಕ್ನಲ್ಲಿ ಪರಾರಿಯಾಗಿದ್ದಾರೆ. ಈ ಚಿನ್ನದ ಸರದ ಮೌಲ್ಯ ಸುಮಾರು 40 ಸಾವಿರ ರೂ. ಆಗಿದ್ದು ರಾಮ್ ರಾಯ್ ನಾಯಕ್ ಕುಂದಾಪುರ ಠಾಣೆಯಲ್ಲಿ ದೂರು ದಾಖಲಾಗಿದೆ.