ವಿದ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆ


ಬೈಂದೂರು: ಕ್ಷುಲ್ಲಕ ಕಾರಣಕ್ಕೆ ಮಾನಸಿಕವಾಗಿ ಮನನೊಂದು ವಿದ್ಯಾರ್ಥಿನಿಯೊಬ್ಬಳು ಮನೆಯಲ್ಲಿಯೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೈಂದೂರು ವ್ಯಾಪ್ತಿಯ ಉಳ್ಳೂರು11 ಉಪ್ರಳ್ಳಿಯಲ್ಲಿ ಮಂಗಳವಾರ ಸಂಜೆ ನಡೆದಿದೆ. ಕುಂದಾಪುರದ ಆರ್‌ಎನ್ ಎಸ್ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಸುಪ್ರೀತಾ ಎಸ್. ಪೂಜಾರಿ (18) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.

ಘಟನೆಯ ವಿವರ:  ಉಪ್ರಳ್ಳಿ ಮಾದಿತ್ಲು ಶ್ರೀನಿವಾಸ ಪೂಜಾರಿ ಅವರ ಪುತ್ರಿಯಾದ ಈಕೆ ಕಲಿಕೆಯಲ್ಲಿ ಪ್ರತಿಭಾವಂತೆಯಾಗಿದ್ದಳು, ಎಸ್‌ಎಸ್‌ಎಲ್ ಸಿ ಯಲ್ಲಿ ಶೇ. 90 ರಷ್ಟು ಅಂಕಪಡೆದು, ಈ ಕಾಲೇಜಿನಲ್ಲಿ  ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಮಂಗಳವಾರ ಬೆಳಗ್ಗೆ ಆಕೆಯ ಮಾವ ಮಣಿಪಾಲದ ಆಸ್ಪತ್ರೆಗೆ ತೆರಳಿದ್ದು, ತಾಯಿ ಕೃಷಿ ಚಟುವಟಿಕೆ ನಡೆಸಲು ತೆರಳಿದ್ದು, ಹಾಗೂ ಮನೆಯಲ್ಲಿರುವ ಅಜ್ಜಿಯನ್ನು ಒತ್ತಾಯ ಪೂರ್ವಕವಾಗಿ ಸನಿಹದಲ್ಲಿರುವ ದೊಡ್ಡಮ್ಮನ ಮನೆಗೆ ಕಳುಹಿಸಿದಳು ಎನ್ನಲಾಗಿದ್ದು ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಮರಣ ಚೀಟಿ ಬರೆದು ಪ್ಯಾನಿಗೆ ಸೀರೆ ಕಟ್ಟಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.
     ಮರಣ ಚೀಟಿಯಲ್ಲಿನ ವಿವರ : ಕಾಲೇಜಿನಲ್ಲಿ ನನ್ನ ಬಗ್ಗೆ ವಿದ್ಯಾರ್ಥಿಗಳು  ಸುಖಾಸುಮ್ಮನೆ ರೇಗಿಸುತ್ತಿದ್ದಾರೆ, ಅಲ್ಲದೇ ಇಲ್ಲಸಲ್ಲದ ಆರೋಪ ಮಾಡುತಿದ್ದು, ಇದರಿಂದಾಗಿ ಮನಸ್ಸಿಗೆ ತುಂಬಾ ನೋವಾಗಿದೆ. ನಾನು ಯಾರನ್ನು ಪ್ರೀತಿಸಿಲ್ಲ, ನಮ್ಮ ತಂದೆ ಸಾಲ ಶೂಲ ಮಾಡಿ ಮನೆಕಟ್ಟಿಸಿದ್ದು, ಕಷ್ಟದಲ್ಲಿಯೇ ನನಗೆ ಕಾಲೇಜಿಗೆ ಕಳುಹಿಸುತ್ತಿದ್ದಾರೆ, ವಿದ್ಯಾಭ್ಯಾಸದ ಕಡೆ ಗಮನ ನೀಡುತ್ತಿದ್ದೇನೆ. ನಾನು ಮಾನಸಿಕವಾಗಿ ಮನನೊಂದು ಈ ನಿರ್ಧಾರಕ್ಕೆ ಬಂದಿದ್ದೇನೆ ಎಂದು ಚೀಟಿಯಲ್ಲಿ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಡೆತ್ ನೋಟ್:
ಸುಪ್ರಿತಾ ಸಾಯುವ ಮುನ್ನ ಒಂದೂವರೆ ಪುಟದಷ್ಟು ಡೆತ್ ನೋಟ್ ಬರೆದಿಟ್ಟಿdf ನನ್ನನ್ನು ತುಂಬಾ ಚೆನ್ನಾಗಿ ಬೆಳೆಸಿದ್ರಿ, ನೀವು ಹಗಲು ರಾತ್ರಿ ದುಡಿತಾ ಇದ್ರಿ ಅಂತ ನಂಗೊತ್ತು, ಒಳ್ಳೆ ರೀತಿಲಿ ಓದಿ ಒಳ್ಳೆ ಮಾರ್ಕ್ಸ್ ತೆಗೊಂಡು ಓದಿ ಒಳ್ಳೆ ಕೆಲಸಕ್ಕೆ ಸೇರಿ ನಿಮ್ಮ ಭಾರ ಕಮ್ಮಿ ಮಾಡಬಹುದು ಅಂತ ಅಂದುಕೊಂಡಿದ್ದೆ. ಆದ್ರೆ ಏನೂ ತಪ್ಪು ಮಾಡದೇ ಇರುವ ನಾನು ಶಿಕ್ಷೆ ಅನುಭವಿಸುವಂತಾಗಿದೆ. ಏಕೆಂದರೆ ಯಾರೂ ನನ್ನ ಬಗ್ಗೆ ಇಲ್ಲಸಲ್ಲದನ್ನೆಲ್ಲಾ ಹೇಳಿ ನನಗೆ ಕಾಲೇಜಿನಲ್ಲಿ ಮತ್ತು ಕುಂದಾಪುರದಲ್ಲಿ ಮರ್ಯಾದೆ ಇಲ್ಲದಂಗೆ ಮಾಡಿಬಿಟ್ಟಿದ್ರು. ನಾನು ಯಾರಿಗೂ ಏನೂ ಮಾಡಿಲ್ಲ. ಆದ್ರೆ ನನ್ನ ಜೀವವನ್ನು ತಗೊಂಡು ಬಿಟ್ಟರು. ನಾನು ಯಾರನ್ನೂ ಪ್ರೀತಿಸಿಲ್ಲ ಅದಕ್ಕೆ ನನ್ನ ಮನಸ್ಸಿನಲ್ಲಿ ಜಾಗವೂ ಇಲ್ಲ, ಪಪ್ಪ ನೀವು ಯಾರು ಏನೇ ಹೇಳಿದ್ರೂ ತಲೆಬಿಸಿ ಮಾಡಿಕೊಳ್ಳಬೇಡಿ. ನನ್ನ ಮಗಳು ಯಾರನ್ನೂ ಪ್ರೀತಿಸಿಲ್ಲ ಅಂತ ಧೈರ್ಯದಿಂದ ಹೇಳಿ. ನೀವು ನನ್ನ ಈ ಎರಡು ವರ್ಷದ ಪಿಯುಸಿಗೆ ಖರ್ಚು ಮಾಡಿರುವ ದುಡ್ಡು ಮತ್ತು ನೀವು ಸಾಲದಲ್ಲಿದ್ದು ನಿಮ್ಮನ್ನು ಮತ್ತೆ ಪ್ರಪಾತಕ್ಕೆ ದೂಡುತ್ತಿರುವ ಈ ಪಾಪಿ ಮಗಳನ್ನು ಕ್ಷಮಿಸಿ. ನನಗೆ ನಾನು ಸಾಯ್ತಾ ಇದ್ದೀನಂತ ಬೇಜಾರಿಲ್ಲ, ಆದ್ರೆ ನನ್ನ ಗುರಿ ತಲುಪಿದ್ದೇನೆ. 

ಸಾಯ್ತಿದೀನಲ್ಲ ಅದಕ್ಕೆ ನನಗೆ ತಪ್ತಿಯಿಲ್ಲ, ನಾನು ಇದನ್ನೆಲ್ಲಾ ಯೊ ೀಚಿಸುತ್ತಾ ಕ್ಲಾಸ್‌ನಲ್ಲಿ ಕುಳಿತಿರುವಾಗ ಸರ್ ಮತ್ತು ಟೀಚರ್ಸ್‌ ಅವರಿಗೆಲ್ಲಾ ನಾನು ಕನಸು ಕಾಣ್ತಾ ಇದ್ದಂತೆ ಅನಿಸಿರಬಹುದು. ಸರ್, ಇರುವ ನಿಜ ಸಂಗತೀನ ತಿಳಿದುಕೊಳ್ಳುವ ಹೊರತು ಎಲ್ಲರನ್ನೂ ಒಂದೇ ದಷ್ಟಿಯಿಂದ ನೋಡಬೇಡಿ, ನನಗೆ ಈ ಮನಸ್ಥಿತಿಯನ್ನು ಇಟ್ಟುಕೊಂಡು ಓದುವುದಕ್ಕೆ ಆಗಲ್ಲ, ಸುಮ್ಮನೆ ನಿಮ್ಮ ದುಡ್ಡು ಖರ್ಚಾಗಂತ ಅನಿಸುತ್ತದೆ. 

ಪಪ್ಪ ತಮ್ಮನಿಗೆ ಪ್ಲೀಸ್ ಓದಿಸಿ ಮತ್ತು ಕಷ್ಟದ ರುಚಿನೂ ತೋರಿಸಿ, ಕೇಳಿದಾಗಲೆಲ್ಲಾ ಹಣ ಕೊಡಬೇಡಿ. ನನ್ನ ಲೈಫಲ್ಲಿ ಪಪ್ಪ ಮಮ್ ನಿಮ್ಮ ಋಣ ತೀರಿಸೋಕ್ಕಾಗಲ್ಲ, ಮಾಮ್ ನಿಮಗೆ ನಾನು ಓದಿ ಒಳ್ಳೆಯ ಕೆಲಸಕ್ಕೆ ಸೇರುತ್ತೇನೆ ಎಂತ ಅಂದುಕೊಂಡಿದ್ದೆ. ಆದ್ರೆ ನಾನು ಹಾಗೆ ಮಾಡದೇನೆ ಹೋಗ್ತಿದ್ದೀನಿ. ಇದರಿಂದ ನಿನಗೆ ನಾನು ನಿನ್ನ ಮರ್ಯಾದೆ ಕಳೆದೆ ಅಂತಾ ಅನಿಸಿರಬಹುದು. ನಾನು ಬದುಕಿದ್ರೂ ನನಗೆ ಏನೂ ಸಾಧನೆ ಮಾಡುವುದಕ್ಕಾಗಲ್ಲ ಅಂತ ಅಂದುಕೊಂಡಿದ್ದೇನಿ. ನನ್ನ ಜೀವನದಲ್ಲಿ ಬಂದ ಒಬ್ಬ ಟೀಚರನ ಋಣ ಮರೆಯುವುದಿಲ್ಲ, ಪಪ್ಪ ನಾನು ಸತ್ತ ಮೇಲೆ ನನ್ನನ್ನ ನಮ್ಮ ಮನೆ ಹತ್ತಿರ ಸುಡಿ. ಇಂತೀ ನಿಮ್ಮ ನತದಷ್ಟೆ ಮಗಳು ಸುಪ್ರೀತಾ. 

ನಾನು ಯಾರನ್ನೂ ಪ್ರೀತಿಸಿಲ್ಲ, ಆದರೂ ಸಾಯ್ತಾ ಇದ್ದೀನಿ. ಇದೆ ದುರಂತ ಯಾಕೆಂದರೆ ಎಷ್ಟೋ ಜನ ಹುಡುಗಿರು ಯಾರ ಜೊತೆಯಲ್ಲಿ ತಿರುಗಿ ನಾಳೆ ಯಾರನ್ನೋ ಮದುವೆ ಆಗತ್ತಾರೆ. ಆದ್ರೆ ನನ್ನ ಬಗ್ಗೆ ತಪ್ಪು ತಪ್ಪಾಗಿ ಯಾರು ಮಾತಾಡಬಾರದು ಅದೇ ನನ್ನ ಆಶಯ. 

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com