ಅಪ್ರಾಪ್ತೆಯ ಮೇಲೆ ನಿರಂತರ ಅತ್ಯಾಚಾರಗೈಯುತ್ತಿದ್ದ ಎರಡು ಪತ್ನಿಯರ ಹಾಗೂ 14 ಮಕ್ಕಳ ತಂದೆಯನ್ನು ಸುರತ್ಕಲ್ ಠಾಣಾಧಿಕಾರಿ ಎಂ.ಎ ನಟರಾಜ್ ವಶಕ್ಕೆ ತೆಗೆದುಕೊಂಡಿದ್ದಾರೆ.
ಪೊಲೀಸ್ ವಶದಲ್ಲಿರುವ ಆರೋಪಿ ಕಾಟಿಪಳ್ಳ ನಿವಾಸಿ ಹಮೀದ್(45) ಈತ ಕಾಟಿಪಳ್ಳದಲ್ಲಿ ವಾಸವಾಗಿದ್ದ ಸಂದರ್ಭದಲ್ಲಿ ತನ್ನ ಮನೆಯ ಪಕ್ಕದಲ್ಲಿದ್ದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಕುಟುಂಬವನ್ನು ಅತ್ಯಂತ ಸಲುಗೆಯನ್ನು ಮಾಡಿದ್ದು ನಂತರ ಈತನ ಉಪಟಳ ತಾಳದೇ ತಮ್ಮ ಬಾಡಿಗೆ ಮನೆಯನ್ನು ಸುರತ್ಕಲ್ ಸಮೀಪದ ಕಾನಕ್ಕೆ ವರ್ಗಾಯಿಸಿದರು ಅಲ್ಲಿಯೂ ಬಂದು ಮನೆಯಲ್ಲಿ ಯಾರು ಇಲ್ಲದ ಸಂದರ್ಭದಲ್ಲಿ ಅಲ್ಲಿ ವಾಸವಾಗಿದ್ದ ಅ ಕುಟುಂಬದ ಅಪ್ರಾಪೆ¤ ಬಾಲಕಿಯನ್ನು ಪುಸಲಾಯಿಸಿ ನಿರಂತರ ಲೈಂಗಿಕ ಕ್ರಿಯೆ ನಡೆಸುತ್ತಿದ್ದ ವಿಷಯ ಬಾಯಿ ಬಿಟ್ಟರೆ ಕೊಲೆ ಮಾಡುವ ಬೆದರಿಕೆಯನ್ನು ಹಾಕಿದ್ದ ಎನ್ನಲಾಗಿದೆ ಯುವತಿ ಮಾನಸಿಕ ಖನ್ನತೆಯನ್ನು ಗಮನಿಸಿ ಮನೆಯವರು ವಿಚಾರಿಸಿದ ಸಂದರ್ಭದಲ್ಲಿ ವಿಷಯ ಹೊರಬಂತು ಅಪ್ತಾಪೆ¤ಯು ಗರ್ಭ ಧರಿಸದಂತೆ ಗರ್ಭ ನಿರೋಧಕ ಮಾತ್ರೆಯನ್ನು ಅಕೆಗೆ ನೀಡುತ್ತಿದ್ದು ಬಾಕಿಯುಳಿದ ಗರ್ಭ ನಿರೋಧಕ ಮಾತ್ರೆಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ ಹಾಗೂ ಯುವತಿ ಅತ್ಯಾಚಾರ ನಡೆಸಿದ ಬಗ್ಗೆ ವೈದ್ಯಕೀಯ ಪರೀಕ್ಷೆಗೆ ಅಪ್ರಾಪೆ¤ಯನ್ನು ಕಳಿಸಲಾಗಿದೆ ೆ ಪೊಲೀಸ್ ವಶದಲ್ಲಿರುವ ವ್ಯಕ್ತಿ ಇಂತಹುದೇ ಅನೇಕ ಗೃಹಿಣಿಯರಿಗೆ ಮೋಸ ಮಾಡಿದ ಬಗ್ಗೆ ಪ್ರಾಥಮಿಕ ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ.