ಆಕ್ರಮ ಗೋ ಮಾಂಸ ವಶ. ಇಬ್ಬರ ಬಂಧನ

ಸಿದ್ದಾಪುರ: ಕುಂದಾಪುರ ತಾಲೂಕು ಸಿದ್ದಾಪುರ ಸಮೀಪದ ಹೆಗೋಡ್ಲುವಿನ ಮನೆಯೊಂದರಲ್ಲಿ ಹಸುಗಳನ್ನು ಕಡಿದು, ಆಕ್ರಮವಾಗಿ ಗೋ ಮಾಂಸ ಮಾಡಲಾಗುತ್ತಿದೆ ಎನ್ನುವ ಖಚಿತ ಮಾಹಿತಿಯ ಮೇರೆಗೆ ಬುಧವಾರ ಸಂಜೆ ಶಂಕರನಾರಾಯಣ ಪೊಲೀಸರು ದಾಳಿ ನಡೆಸಿ ಸುಮಾರು 26 ಕೆ.ಜಿ. ಗೋಮಾಂಸ ಪತ್ತೆಯಾಗಿದ್ದು, ಈ ಸಂಬಂಧ ಇಬ್ಬರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

ಹೊಸಂಗಡಿ ಗ್ರಾಮದ ಹೆಗೋಡ್ಲುನಲ್ಲಿ ಕೇರಳ ಮೂಲದವರು ಇತ್ತೀಚಿಗೆ ಜಾಗ ಖರೀದಿಸಿದ್ದು, ಇಲ್ಲಿ ಆಕ್ರಮವಾಗಿ ಗೋವುಗಳನ್ನು ಕಡಿದು ಮಾಂಸಗಳನ್ನು ಮಾಡುತ್ತಿರುವ ಬಗ್ಗೆ ಶಂಕರನಾರಾಯಣ ಪೊಲೀಸರಿಗೆ ದೂರುಗಳು ಬರುತ್ತಿದ್ದವು. ಈ ಹಿನ್ನಲೆಯಲ್ಲಿ ಬುಧವಾರ ಪೊಲೀಸರು ದಾಳಿ ನಡೆಸಿದ್ದಾಗ ಸುಮಾರು 26 ಕೆ.ಜಿ. ಗೋಮಾಂಸ ಹಾಗೂ ಹತ್ಯೆಗೆ ಬಳಸಿದ ಪರಿಕರಗಳು ಪತ್ತೆಯಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಮೂಲಕ ಆಶ್ರಫ್‌ ಹಾಗೂ ಶಂಕರ ಅವರನ್ನು ವಶಕ್ಕೆ ತೆಗೆದುಕೊಂಡು, ಪ್ರಕರಣ ದಾಖಲಿಸಿಕೊಂಡ ಘಟನೆಯು ಶಂಕರನಾರಾಯಣ ಪೊಲೀಸ್‌ ಠಾಣೆಯಲ್ಲಿ ನಡೆದಿದೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com