ಬೈಂದೂರಿನಲ್ಲಿ ಸರಣಿ ಕಳ್ಳತನ. ಲಕ್ಷ ಮೌಲ್ಯದ ಸೊತ್ತು ಕಳವು.

ಬೈಂದೂರು: ಸೋಮವಾರ ತಡರಾತ್ರಿ ಸರಣಿ ಕಳ್ಳತನ ನಡೆದಿದೆ. ಮೂರು ಜ್ಯುವೆಲ್ಲರಿ ಶಾಪ್‌ಗಳಿಗೆ ನುಗ್ಗಿದ ಕಳ್ಳರು ಚಿನ್ನ ಹಾಗೂ ಬೆಳ್ಳಿಯ ಆಭರಣಗಳು ಸೇರಿದಂತೆ ಸುಮಾರು 6 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಅಪಹರಿಸಿದ್ದಾರೆ. ಏಳಕ್ಕೂ ಅಧಿಕ ಅಂಗಡಿಗಳನ್ನು ಮುರಿಯಲು ಯತ್ನಿಸಿದ್ದಾರೆ.   
ಬೈಂದೂರು ವತ್ತದಲ್ಲಿರುವ ಮಹಾಲಸಾ ನಾರಾಯಣಿ ಜ್ಯುವೆಲ್ಲರಿ, ಗಣೇಶ ಶೇಟ್ ಜ್ಯುವೆಲ್ಲರಿ ಹಾಗೂ ನಾಗರಾಜ ಜ್ಯುವೆಲ್ಲರಿಗಳಿಗೆ ನುಗ್ಗಿದ ಕಳ್ಳರು ಅಲ್ಲಿದ್ದ ಸುಮಾರು 6 ಲಕ್ಷ ಮೌಲ್ಯದ ವಸ್ತುಗಳನ್ನು ಕಳವು ಮಾಡಿದ್ದಾರೆ. ಮಹಾಲಸಾ ನಾರಾಯಣಿ ಜ್ಯುವೆಲ್ಲರಿಯಲ್ಲಿನ 50 ಗ್ರಾಂ ಚಿನ್ನಾಭರಣ ಮತ್ತು 3 ಕೆ.ಜಿ ಬೆಳ್ಳಿ ಸೇರಿದಂತೆ 2 ಲಕ್ಷದ 60 ಸಾವಿರ ರೂ ಬೆಲೆಬಾಳುವ ವಸ್ತುಗಳು, ಗಣೇಶ ಶೇಟ್ ಜ್ಯುವೆಲ್ಲರಿಯ 40 ಗ್ರಾಂ ಚಿನ್ನಾಭರಣ, 1 ಕೆ.ಜಿ ಬೆಳ್ಳಿ ಹಾಗೂ 2ಸಾವಿರ ನಗದು ಸೇರಿದಂತೆ 1 ಲಕ್ಷದ 47 ಸಾವಿರ, ನಾಗರಾಜ ಜ್ಯುವೆಲ್ಲರಿಯ 40 ಗ್ರಾಂ ಚಿನ್ನ, 2 ಕೆ.ಜಿ ಬೆಳ್ಳಿ ಹಾಗೂ ಸಾವಿರ ರೂ. ನಗದು ಸೇರಿದಂತೆ 1 ಲಕ್ಷದ 90 ಸಾವಿರ ಮೌಲ್ಯದ ವಸ್ತು ಕಳ್ಳತನವಾಗಿದೆ ಎಂದು ಅಂದಾಜಿಸಲಾಗಿದೆ. 

   ಬೈಂದೂರು ಪೇಟೆ ವಠಾರದಲ್ಲಿನ ವೈನ್ಸ್ ಶಾಪ್ ಸೇರಿದಂತೆ 7ಕ್ಕೂ ಅಧಿಕ ಅಂಗಡಿಗಳನ್ನು ಮುರಿಯುವ ಯತ್ನ ನಡೆಸಿದ್ದಾರೆ. ಮಂಗಳವಾರ ಬೆಳಗ್ಗೆ ಶ್ವಾನ ದಳ ಹಾಗೂ ಬೆರಳಚ್ಚು ತಜ್ಞರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದರು.

ಹೆಚ್ಚುವರಿ ಎಸ್‌ಪಿ ಸಂತೋಷ ಕುಮಾರ ಶೆಟ್ಟಿ, ಡಿವೈಎಸ್‌ಪಿ ಸಿ.ಬಿ. ಪಾಟೀಲ್, ಅಪರಾಧ ಪತ್ತೆದಳದ ಇನ್ಸ್‌ಪೆಕ್ಟರ್ ಜಯಕುಮಾರ ನೇತತ್ವದ ತಂಡ ಹಾಗೂ ವತ್ತ ನಿರೀಕ್ಷಕ ಸುದರ್ಶನ ಎಂ, ಬೈಂದೂರು ಠಾಣಾಧಿಕಾರಿ ಸಂತೋಷ ಕಾಯ್ಕಿಣೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ. 

ಸರಣಿ ಕಳ್ಳತನವನ್ನು ಮೇಲ್ ನೋಟಕ್ಕೆ ಗಮನಿಸಿದಾಗ ಅಂತಾರಾಜ್ಯ ಕಳ್ಳರ ಶಂಕೆ ಕಂಡು ಬರುತಿದ್ದು, ಈ ಬಗ್ಗೆ ಮೂರು ವಿಶೇಷ ತಂಡಗಳನ್ನು ರಚಿಸಿ, ಶೀಘ್ರ ಆರೋಪಿಗಳನ್ನು ಪತ್ತೆ ಹಚ್ಚಲಾಗುವುದು ಎಂದು ಡಿವೈಎಸ್‌ಪಿ ಸಿ.ಬಿ. ಪಾಟೀಲ್ ತಿಳಿಸಿದ್ದಾರೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com