ಮುಜಾಫರ್ನಗರ: ಉತ್ತರಪ್ರದೇಶ ಮುಜಾಫರ್ನಗರದ ಬಾಲ್ವಕೇರಿ ಜಿಲ್ಲೆಯಲ್ಲಿ ಮೂರು ವಿದ್ಯಾರ್ಥಿಗಳು ಸೇರಿ ಶಿಕ್ಷಕಿಯೊರ್ವರ ಮೇಲೆ ಅತ್ಯಾಚಾರ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
23ರ ಹರೆಯದ ಶಿಕ್ಷಕಿ ರಾತ್ರಿ ಟ್ಯೂಷನ್ ಮುಗಿಸಿಕೊಂಡು ಮನೆಗೆ ಬರುವಾಗ ಮಾರ್ಗ ಮಧ್ಯೆ ಆಕೆಯ ಅಪಹರಿಸಿ ಅತ್ಯಾಚಾರ ನಡೆಸಿದ್ದು, ಅಲ್ಲದೆ ಬ್ಯಾಕ್ಮೇಲ್ ಮಾಡುವ ಸಲುವಾಗಿ ತಮ್ಮ ಮೊಬೈಲ್ನಲ್ಲಿ ಅತ್ಯಾಚಾರದ ದೃಶ್ಯಗಳನ್ನು ಚಿತ್ರೀಕರಿಸಿಕೊಂಡಿದ್ದಾರೆ.
ನೊಂದ ಮಹಿಳೆಯ ದೂರಿನನ್ವಯ, ಪ್ರಮುಖ ಆರೋಪಿ ಮೋಹಿತ್ ಎಂಬಾತ ನನ್ನ ಹಿಂದೆ ಬಂದು ನನ್ನ ಬಾಯಿ ಮುಚ್ಚಿ ನನ್ನನ್ನು ಖಾಲಿ ಮನೆಯೊಂದಕ್ಕೆ ಎಳೆದುಕೊಂಡು ಹೋಗಿದ್ದ ನಂತರ ಆತನ ಇಬ್ಬರು ಸ್ನೇಹಿತರಿಗೆ ಕರೆ ಮಾಡಿ ಕರೆಸಿಕೊಂಡು ನನ್ನ ಮೇಲೆ ಅತ್ಯಾಚಾರ ನಡೆಸಿದ್ದಾರೆ. ಅಲ್ಲದೆ ಅತ್ಯಾಚಾರ ದೃಶ್ಯಗಳನ್ನು ತಮ್ಮ ಮೊಬೈಲ್ನಲ್ಲಿ ಚಿತ್ರೀಕರಸಿಕೊಂಡಿದ್ದು, ಈ ವಿಷಯವನ್ನು ಹೊರಗೆ ಹೇಳದಂತೆ ಧಮಕಿ ಹಾಕಿದ್ದರು ಎಂದು ತಿಳಿಸಿದ್ದಾಳೆ.
ಈ ಮೂರು ಆರೋಪಿಗಳು ಕಾಲೇಜು ವಿದ್ಯಾರ್ಥಿಗಳಾಗಿದ್ದು, ಕಳೆದ ರಾತ್ರಿಯೇ ಇವರನ್ನು ಬಂಧಿಸಿರುವ ಪೊಲೀಸರು ಅತ್ಯಾಚಾರ ಹಾಗೂ ಐಟಿ ಕಾಯ್ದೆ ಅನ್ವಯ ಕೇಸು ದಾಖಲಿಸಿದ್ದಾರೆ.