ಸ್ತ್ರೀ ಪೀಡಕನಿಗೆ ಛೀಮಾರಿ

ಸಾಲಿಗ್ರಾಮ: ಇಲ್ಲಿನ ಮೀನು ಮಾರುಕಟ್ಟೆ ಸಮೀಪ ಡ್ರೈಕ್ಲೀನರ್‌ ನಡೆಸುತ್ತಿರುವ ಹೆಣ್ಮಕ್ಕಳ ಪೀಡಕನೋರ್ವನಿಗೆ ಶನಿವಾರ ಸಂಜೆ ಸಾರ್ವಜನಿಕರು ಧರ್ಮದೇಟು ನೀಡಿ, ಛೀಮಾರಿ ಹಾಕಿಸಿದ ಘಟನೆ ನಡೆದಿದೆ.

ಮೊದಲಿನಿಂದಲೂ ಹೆಣ್ಮಕ್ಕಳ ವಿರುದ್ದ ಸಿಕ್ಕ-ಸಿಕ್ಕವರಲ್ಲಿ ಹಗುರವಾಗಿ ಮಾತನಾಡುವ ಈತ, ಇತ್ತಿಚೆಗೆ ಕೋಟದ ಮೆಡಿಕಲ್‌ ಒಂದರಲ್ಲಿ ಕೆಲಸ ನಿರ್ವಹಿಸುವ ಯುವತಿ ವಿರುದ್ದವಾಗಿ ಸತತ ಅಪಪ್ರಚಾರಗಳನ್ನು ಮಾಡಿದ್ದು ಘಟನೆಗೆ ಕಾರಣ ಎನ್ನಲಾಗಿದೆ.

ಮೊದಲಿಗೆ ಒಂದೆರಡು ಮಂದಿ ಆತನಲ್ಲಿ ವಿಚಾರಿಸಲು ತೆರಳಿದ್ದು, ಸುದ್ದಿ ತಿಳಿದು ನೂರಾರು ಮಂದಿ ಘಟನಾ ಸ್ಥಳದಲ್ಲಿ ಜಮಾಯಿಸಿ, ಆತನ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ನೆರೆದ ಸಾರ್ವಜನಿಕರು ಅಂಗಡಿ ಮುಚ್ಚುವಂತೆ ಹೇಳಿ ಹೊರಗಡೆಬರುವಂತೆ ಕೋರಿದರು. ಆದರೆ ಆತ ಬಾರದೇ ಇದ್ದಾಗ ಮತ್ತೆ ಪುನಃ ಗಲಾಟೆ ಆರಂಭವಾಯಿತು. ಕೂಡಲೇ ಒಂದೆರಡು ಮಂದಿ ಮಧ್ಯಸ್ಥಿಕೆ ವಹಿಸಿ ಆತನನ್ನು ಸುರಕ್ಷಿತವಾಗಿ ಮನೆಗೆ ತಲುಪಿಸಿದರು. ಒಂದು ಗಂಟೆಗೂ ಅಧಿಕ ಕಾಲ ದೊಡ್ಡ ಮಟ್ಟದಲ್ಲಿ ಜನ ಸಂದಣಿ ಸೇರಿ ಪ್ರತಿಭಟಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com