ವಿದ್ಯಾರ್ಥಿನಿಯರ ಸರ ಅಪಹಣಕ್ಕೆ ಯತ್ನ: ಇಬ್ಬರು ವಶಕ್ಕೆಬೈಂದೂರು: ಶಿರೂರು ಕಾಲೇಜಿನ ವಿದ್ಯಾರ್ಥಿನಿ ರತ್ನ ಅರಣ್ಯ ಮಾರ್ಗದಲ್ಲಿ ನಾಪತ್ತೆಯಾಗಿ ನಿಗೂಢವಾಗಿ ಸಾವನ್ನಪ್ಪಿದ ಪ್ರಕರಣ ತನಿಖೆ ಹಂತದಲ್ಲಿರುವಾಗಲೇ, ಬೈಂದೂರು ಪದವಿಪೂರ್ವ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ಮನೆಗೆ ತೆರಳುತಿದ್ದಾಗ ಹುಲ್ಕಡಿಕೆ ನಿರ್ಜನ ಅರಣ್ಯ ಪ್ರದೇಶದಲ್ಲಿ ಸರ ಅಪಹರಣದ ವಿಫಲ ಯತ್ನ ಮಂಗಳವಾರ ಸಂಜೆ ನಡೆದಿದೆ. ಪಾನಮತ್ತರಾಗಿ ಬಂದ ಇಬ್ಬರು ಯುವಕರು ವಿದ್ಯಾರ್ಥಿನಿಯೊಂದಿಗೆ ಸರ ಎಳೆಯಲು ಯತ್ನಿಸಿ, ಇದೀಗ ಪೊಲೀಸರ ಅತಿಥಿಯಾಗಿದ್ದಾರೆ. ಬೈಂದೂರು ಗ್ರಾಮದ ಗಂಗನಾಡಿನ ನಿವಾಸಿಯಾದ ಗಣಪ ಮರಾಠಿ (34) ಹಾಗೂ ಹೆರಿಯ ಮರಾಠಿ (28) ವಿದ್ಯಾರ್ಥಿನಿಯರ ಕುತ್ತಿಗೆಯಲ್ಲಿದ್ದ ಚೈನು ಅಪಹರಿಸಲು ಯತ್ನಿಸಿದ ಆರೋಪಿಗಳು.
ಘಟನೆಯ ವಿವರ: ಬೈಂದೂರು ಸರಕಾರಿ ಪದವಿಪೂರ್ವ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ಎಂದಿನಂತೆ ಮಂಗಳವಾರ ಸಂಜೆ ಕಾಲೇಜು ಮುಗಿಸಿ ಬೈಂದೂರಿನಿಂದ ಸುಮಾರು 8 ಕಿ.ಮೀ. ದೂರದ ವಸ್ರೆಯವರೆಗೆ ಬಸ್‌ನಲ್ಲಿ ಸಂಚರಿಸಿ ಬಳಿಕ 5 ಕಿ.ಮೀ ದೂರ ದುರ್ಗಮ ಕಾಡು ದಾರಿಯಲ್ಲಿ ನಡೆದುಕೊಂಡು ಹುಲ್ಕಡಿಕೆಯಲ್ಲಿರುವ ಮನೆಗೆ ತೆರಳುತಿದ್ದರು. ಹೀಗೆ ನಡೆದುಕೊಂಡು ನಿರ್ಜನ ಅರಣ್ಯ ಪ್ರದೇಶದಲ್ಲಿ ಹೋಗುತ್ತಿದ್ದಾಗ ಹಿಂದಿನಿಂದ ಬೈಕ್‌ನಲ್ಲಿ ಬಂದ ಆರೋಪಿಗಳು ವಿದ್ಯಾರ್ಥಿನಿಯರೊಂದಿಗೆ ಮಾತನಾಡುತ್ತಲೇ ಕುತ್ತಿಗೆಯಲ್ಲಿರುವ ಚೈನ್‌ನ್ನು ಅಪಹರಿಸಲು ಹವಣಿಸುತ್ತಿದ್ದಾಗ ಸಂಶಯಗೊಂಡ ವಿದ್ಯಾರ್ಥಿನಿಯರು ಅರಣ್ಯ ಪ್ರದೇಶದಲ್ಲಿ ಓಡಿ ಸನಿಹದಲ್ಲಿರುವ ಮನೆಯವರನ್ನು ಕೂಗಿದರು. ಬಳಿಕ ಆರೋಪಿಗಳು ಅಲ್ಲಿಂದ ಕಾಲ್ಕಿತ್ತಿದ್ದಾರೆ ಎನ್ನಲಾಗಿದೆ. 

ವಿದ್ಯಾರ್ಥಿನಿಯರು ನಡೆದ ಘಟನೆಯನ್ನು ತಮ್ಮ ಮನೆಯಲ್ಲಿ ತಿಳಿಸಿ, ಪೊಲೀಸರಿಗೆ ದೂರು ನೀಡಿದರು. ತಕ್ಷಣ ಕಾರ್ಯಪ್ರವತ್ತರಾದ ಬೈಂದೂರು ವತ್ತ ನಿರೀಕ್ಷಕ ಎಸ್. ಸುದರ್ಶನ ಹಾಗೂ ಠಾಣಾಕಾರಿ ಸಂತೋಷ್ ಕಾಯ್ಕಿಣಿ ತಂಡ ಆರೋಪಿಗಳನ್ನು ಬಂಧಿಸುವನ್ನು ಯಶಸ್ವಿಯಾಗಿದ್ದಾರೆ. 
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com