ಕುಂದಾಪುರ: ತಾಲೂಕಿನ ಕಕ್ಕುಂಜೆ ಗ್ರಾಮದ ಹೋರ್ಗುಂಡಿ ಎಂಬಲ್ಲಿ ಮಹಿಳೆ ನೀರಿನ ಸೆಳವಿಗೆ ಸಿಲುಕಿ ಮತಪಟ್ಟಿದ್ದಾರೆ. ಪ್ರೇಮಾ ಯಾನೆ ಬುಡ್ಡಿಬಾಯಿ(55) ಮತರು. ಜು.11ರಂದು ಸಂಜೆ 5ಗಂಟೆಗೆ ಸಮೀಪದ ಮುಳಹಕ್ಲು ಸತ್ಯನಾರಾಯಣ ಎಂಬವರ ಮನೆಗೆ ಬಂದಿದ್ದ ಇವರು ಮರಳಿ ಮನೆಗೆ ಹೋಗುವುದಾಗಿ ಹೇಳಿ ಹೊರಟವರು ನಾಪತ್ತೆಯಾಗಿದ್ದರು. ಭಾನುವಾರ ಸಂಜೆ ಹರ್ಕಾಡಿ ಉಡುಪರ ಮನೆ ಸಮೀಪದ ಹೊಳೆಯಲ್ಲಿ ಮತದೇಹ ಪತ್ತೆಯಾಗಿತ್ತು. ಹೊಳೆ ದಾಟುವಾಗ ನೀರಿನ ಸೆಳವಿಗೆ ಸಿಲುಕಿ ಕೊಚ್ಚಿಹೋಗಿ ಮತಪಟ್ಟಿರಬಹುದೆಂದು ಶಂಕಿಸಲಾಗಿದೆ. ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.