ವೇಶ್ಯಾವಾಟಿಕೆ ನಡೆಸುತ್ತಿದ್ದವರ ಬಂಧನ

ಬ್ರಹ್ಮಾವರ : ಪೆಜಮಂಗೂರು ಗ್ರಾಮದ ಕೊಕ್ಕರ್ಣೆ ಬಳಿ ಸರಳಾ ಅವರ ಮನೆಯಲ್ಲಿ ಹುಡುಗಿಯರನ್ನು ತಂದು ವೇಶ್ಯಾವಾಟಿಕೆ ನಡೆಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ದೊರೆತ ಮೇರೆಗೆ ರವಿವಾರ ಬ್ರಹ್ಮಾವರ ಪೊಲೀಸ್‌ ಉಪನಿರೀಕ್ಷಕ ಗಿರೀಶ್‌ ಕುಮಾರ್‌ ಎಸ್‌. ಸಿಬಂದಿಯೊಂದಿಗೆ ದಾಳಿ ನಡೆಸಿದ್ದಾರೆ.

ಆರೋಪಿಗಳಾದ ಗಣೇಶ್‌ ಶೆಣೈ, ಸರಳಾ ರಾವ್‌ ಅವರು ಯುವತಿಯೊಬ್ಬಳನ್ನು ಪುಸಲಾಯಿಸಿ ಮನೆಯಲ್ಲಿ ಇರಿಸಿಕೊಂಡು ಮಹೇಶ್‌ ಆಚಾರ್ಯ, ರವೀಂದ್ರ, ಉದಯ ಶೇರಿಗಾರ್‌ ಅವರನ್ನು ಮನೆಗೆ ಕರೆಸಿ ವೇಶ್ಯಾವಾಟಿಕೆ ನಡೆಸುತ್ತಿದ್ದರು ಎನ್ನಲಾಗಿದೆ. ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡು ರೂ. 8,850 ನಗದು, ಒಟ್ಟು 80,000 ರೂ. ಮೌಲ್ಯದ 4 ಬೈಕ್‌ಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.

ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com