ಕೋಟ: ತೋಡು ದಾಟುತ್ತಿದ್ದ ಮಹಿಳೆಯೋರ್ವರು ಪ್ರವಾಹದಲ್ಲಿ ಕೊಚ್ಚಿಹೋಗಿ ಮೃತಪಟ್ಟಿದ್ದಾರೆ.
ಕಕ್ಕುಂಜೆ ಹೋರ್ಗುಂಡಿಯ ನಿವಾಸಿ ಪ್ರೇಮಾ ನಾಯ್ಕ (55) ಮೃತಪಟ್ಟವರು. ಪ್ರೇಮಾ ಅವರು ಜು. 11ರಂದು ಕಕ್ಕುಂಜೆಯಲ್ಲಿರುವ ಅಳಿಯನ ಮನೆಗೆ ಬಂದಿದ್ದು, ಸಂಜೆ 5 ಗಂಟೆಗೆ ತನ್ನ ಮನೆಗೆ ಹೋಗುವುದಾಗಿ ತಿಳಿಸಿ ತೆರಳಿದ್ದರು. ಅನಂತರ ಅವರು ಕಾಣೆಯಾಗಿದ್ದರು. ಬಹಳಷ್ಟು ಹುಡುಕಾಟದ ಬಳಿಕ ಜು. 13ರಂದು ಮಧ್ಯಾಹ್ನ ಅವರ ಮೃತದೇಹವು ಹರ್ಕಾಡಿಯ ಹೊಳೆಯಲ್ಲಿ ಪತ್ತೆಯಾಗಿದೆ.