ಬಾವಿಗೆ ಹಾರಿ ತಾಯಿ-ಮಗು ಆತ್ಮಹತ್ಯೆ

ಕುಂದಾಪುರ: ತಾಯಿಯೊಬ್ಬಳು ತನ್ನ 3 ವರ್ಷದ ಮಗುವಿನೊಂದಿಗೆ ಬಾವಿಗೆ ಹಾರಿ  ಆತ್ಮಹತ್ಯೆಗೈದ ಘಟನೆ ಕುಂದಾಪುರ ತಾಲೂಕಿನ ನಾವುಂದ ಗ್ರಾಮದಲ್ಲಿ ರವಿವಾರ ಸಂಭವಿಸಿದೆ .

ಆತ್ಮಹತ್ಯೆಯಲ್ಲಿ ಮೃತಪಟ್ಟವರನ್ನು ನಾವುಂದ ನಿವಾಸಿಗಳಾದ ನಾಗರತ್ನ(25) ತ್ರಿಶಾ(3) ಎಂದು ಗುದುತಿಸಲಾಗಿದೆ .

ತಗ್ಗರ್ಸೆ ಗ್ರಾಮದ ಬೂಸಕ್ರಡಿ ಮನೆ ನಾಗರತ್ನ ಹತ್ತನೇ ತರಗತಿಯ ತನಕ ವಿದ್ಯಾಭ್ಯಾಸ ಮಾಡಿದ್ದು, ಕಳೆದ ಐದು ವರ್ಷಗಳ ಹಿಂದೆ ನಾವುಂದ ಗ್ರಾಮದ ಹೊಸಹಕ್ಲು ನಿವಾಸಿ ಮಹೇಶ ದೇವಾಡಿಗನನ್ನು ವಿವಾಹವಾಗಿ ಅವರ ಮನೆಯಲ್ಲಿ ನೆಲೆಸಿದ್ದರು.

ಪತಿ ಪತ್ನಿಯ ನಡುವೆ ಆಗಾಗ ಚಿಕ್ಕ ಪುಟ್ಟ ವಿಷಯಗಳಿಗೆ ಜಗಳ ಕಂಡು ಬರುತ್ತಿದ್ದು, ಈ ಬಗ್ಗೆ ಮನೆಯವರಿಗೆ ತಿಳಿದು ಬುದ್ದಿವಾದ ಹೇಳಿ ಸರಿಪಡಿಸಲಾಗಿತ್ತು ಎನ್ನಲಾಗಿದೆ. ಮಗುವಿಗೆ ಎರಡು ವರ್ಷದ ಹುಟ್ಟುಹಬ್ಬವನ್ನು ಅತ್ಯಂತ ವಿಜ್ರಂಭಣೆಯಿಂದ ಈತ ಮಾಡಿದ್ದ ಎನ್ನುವುದನ್ನು ಸ್ಥಳಿಯರು ತಿಳಿಸುತ್ತಾರೆ. ಆದರೆ ಜೂ.28ರಂದು ಸಂಜೆ ಆಕೆ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ತಾಳಿ ಮಗುವಿನೊಂದಿಗೆ ತೆರಳಿದ್ದರು. ಕತ್ತಲಾದರೂ ಮನೆಗೆ ಬಾರದಿರುವುದನ್ನು ಗಮನಿಸಿದ ಮನೆಯವರು ಹುಡುಕಾಡಿದಾಗ ಆಕೆ ಮತ್ತು ಮಗುವಿನ ಶವ ಬಾವಿಯಲ್ಲಿ ಕಂಡು ಬಂದಿತ್ತು.

ಗಂಡ ಹೆಂಡಿರ ನಡುವೆ ಆಗಾಗ ಜಗಳ ಏರ್ಪಡುತ್ತಿದ್ದು, ಆಕೆಯ ಪತಿ ಮಹೇಶ ನಾಗರತ್ನಳಿಗೆ ದೆ„ಹಿಕ ಹಾಗೂ ಮಾನಸಿಕ ಚಿತ್ರಹಿಂಸೆ ನೀಡಿ ಆಗಾಗ ಅವಳ ಆತ್ಮಹತ್ಯೆಗೆ ಪ್ರಚೋದ‌ನೆ ನೀಡುತ್ತಿದ್ದಾನೆ, ಆತನ ಈ ವರ್ತನೆಯಿಂದ ಬೇಸರಗೊಂಡು ಕಿರುಕುಳ ತಾಳಲಾರದೇ ಆಕೆ ಜೀವನದಲ್ಲಿ ಜಿಗುಪ್ಸೆಗೊಂಡು ಮಗುವಿನೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮೃತರ ಸಂಬಂಧಿ ಬೈಂದೂರು ಠಾಣೆಯಲ್ಲಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಮಹೇಶ ಪಾನಿ ಪೂರಿ ಮಾರಾಟ ಮಾಡುವ ಉದ್ಯೋಗ ನಡೆಸುತ್ತಿದ್ದು, ಶನಿವಾರ ತನ್ನ ಕುಟುಂಬದವರೊಂದಿಗೆ ಕಾಳವಾರದ ತನ್ನ ಕುಟುಂಬ ನಂಬಿಕೊಂಡು ಬಂದ ದೆ„ವದ ಮನೆಗೆ ಹೋಗಿದ್ದಾನೆ ಎನ್ನಲಾಗಿದೆ, ಆ ಸಮಯದಲ್ಲಿ ಮನೆಯಲ್ಲಿ ನಾಗರತ್ನ, ಆಕೆಯ ಮಗು ತ್ರಿಷಾ ಹಾಗೂ ‌ ಆಕೆಯ ಅತ್ತೆ ಮಾತ್ರ ಇದ್ದರು ಎನ್ನಲಾಗಿದೆ.

 ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೋಲಿಸರು ಮಹೇಶನನ್ನು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಂಡಿದ್ದಾರೆ. ಜೂ.29ರ ಬೆಳಗ್ಗೆ ಸ್ತಳಕ್ಕೆ ಕುಂದಾಪುರ ತಹಶೀಲ್ದಾರ ಗಾಯತ್ರಿ ನಾಯಕ್‌,  ಬೈಂದೂರು ವೃತ್ತ ನಿರೀಕ್ಷಕ ಸುದರ್ಶನ್‌ ಹಾಗೂ ಉಪನಿರೀಕ್ಷಕ ಸಂತೋಷ ಭೇಟಿ ನೀಡಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com