ಕುಂಭಾಸಿ : ಇಲ್ಲಿನ ಪ್ರಮುಖ ಮಾರ್ಗದಲ್ಲಿರುವ ಸಾಕೇತ್ ಸ್ಟುಡಿಯೋದಲ್ಲಿ ಜೂ.6 ಶುಕ್ರವಾರ ರಾತ್ರಿ ಕಳವು ಸಂಭವಿಸಿದೆ .
ಸಾಕೇತ್ ಸ್ಟುಡಿಯೋದ ಮಾಲೀಕ ಚಂದ್ರ.ಬಿ ಅವರು ಎಂದಿನಂತೆ ಸ್ಟುಡಿಯೋದಲ್ಲಿ ಕಾರ್ಯವನ್ನು ಮುಗಿಸಿ ರಾತ್ರಿ ಹಿಂದಿರುಗಿದ ಸಂದರ್ಭದಲ್ಲಿ ಸ್ಟುಡಿಯೋದಲ್ಲಿದ ನಿಕಾನ್ ಡಿ.80 ಕ್ಯಾಮರಾ , ಕ್ಯಾಮರಾ ಪ್ಲ್ಯಾಶ್, ಮೂರು ನೋಕಿಯಾ ಮೊಬೈಲ್(ಮೊಬೈಲ್ ಕರೆನ್ಸಿ ರೀ ಚಾರ್ಜ್ಗೆ ಇರಿಸಿದ ಮೊಬೈಲ್) ಮತ್ತು ಹತ್ತು ಮೊಬೈಲ್ ಚಾರ್ಜರ್ಗಳು ಹಾಗೂ ಕ್ಯಾಶ್ ಟೇಬಲ್ನಲ್ಲಿ ದ್ದ ಸುಮಾರು ರೂಪಾಯಿ ನಾಲ್ಕು ಸಾವಿರ ಕಳವು ಪ್ರಕರಣ ನಡೆದಿದೆ ಹೇಳಿದ್ದಾರೆ.
ಮೇಲ್ಚಾವಣಿಯಿಂದ ಒಳಗೆ ನುಗ್ಗಿದ ಕಳ್ಳರು : ಈ ಹಳೆಯ ಕಟ್ಟಡದಲ್ಲಿ ಸುಮಾರು ಹನ್ನೆರಡು ವರ್ಷಗಳಿಂದಲೂ ಸಾಕೇತ್ ಸ್ಟುಡಿಯೋವನ್ನು ತನ್ನದೆಯಾದ ಶೈಲಿಯಲ್ಲಿ ಗ್ರಾಹಕರ ಹಿತದೃಷ್ಟಿಯನ್ನು ಇರಿಸಿಕೊಂಡು ಇಲ್ಲಿ ಮೊಬೈಲ್ ಕರೆನ್ಸಿ ರೀ ಚಾರ್ಜ್, ಝೆರಾಕ್ಸ್ , ಫೋಟೋ ಲ್ಯಾಮಿನೇಶನ್, ಛಾಯಾಗ್ರಹಣದೊಂದಿಗೆ ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಿದ್ದರು . ಆದರೆ ಇದನ್ನು ಕಂಡ ಕದ್ದಿಮರು ರಾತ್ರೋ ರಾತ್ರಿ ಸ್ಟುಡಿಯೋದ ಮೇಲ್ಚಾವಣಿಯ ಹಂಚು ತೆಗೆದು ಒಳಗೆ ಪ್ರವೇಶಿಸಿದ್ದಾರೆ. ಅಂದಾಜು ಸುಮಾರು ರೂಪಾಯಿ 70 ಸಾವಿರಕ್ಕೂ ಅಧಿಕ ಮೌಲ್ಯದ ಸೊತ್ತನ್ನು ಕದ್ದೊಯ್ದಿದ್ದಾರೆ , ಈ ಪ್ರಕರಣ ಹಿಂದೆ ಸ್ಥಳೀಯ ಕಳ್ಳರ ಕೈವಾಡವಿರುವ ಬಗ್ಗೆ ಶಂಕೆ ವ್ಯಕ್ತವಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಘಟನೆ ತಿಳಿಯುತ್ತಿದ್ದಂತೆ ಕುಂದಾಪುರ ಪೋಲಿಸ್ ಸ್ಥಳಕ್ಕೆ ದಾವಿಸಿ ಪರಿಶೀಲಿಸಿದ್ದಾರೆ.