ಹಫ್ತಾ ವಸೂಲಿ: ಇಬ್ಬರ ಸೆರೆ

ಕುಂದಾಪುರ: ಉಡುಪಿ ಜಿಲ್ಲಾ ಅಪರಾಧ ಪತ್ತೆ ದಳದ ಪೊಲೀಸರು ಶನಿವಾರ ನಡೆಸಿದ ಕಾರ್ಯಾಚರಣೆಯಲ್ಲಿ, ಎರಡು ತಿಂಗಳ ಹಿಂದಿನ ಕೊಲ್ಲೂರು ಹಪ್ತಾ ವಸೂಲಿ ಪ್ರಕರಣದ ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ. 

ರೌಡಿ ಶೀಟರ್ ಹರೀಶ್ ರೆಡ್ಡಿ ಮತ್ತು ಆತನ ಸಹಚರ ವಿವೇಕ್ ನಾಯಕ್ ಬಂಧಿತರು. 2 ತಿಂಗಳ ಹಿಂದೆ ಕೊಲ್ಲೂರಿನ ಅರ್ಚಕರೊಬ್ಬರಿಗೆ 50 ಲಕ್ಷ ನೀಡುವಂತೆ ಬೇಡಿಕೆಯಿಟ್ಟಿದ್ದಲ್ಲದೆ, ನೀಡದಿದ್ದರೆ ಪುತ್ರನನ್ನು ಅಪಹರಿಸುವುದಾಗಿ ಬೆದರಿಸಿದ್ದರು. ಕೊಲ್ಲೂರು ಪೊಲೀಸರು ಕೃತ್ಯ ಬೇಧಿಸುವ ಸಂದರ್ಭ ಇವರಿಬ್ಬರೂ ತಪ್ಪಿಸಿಕೊಂಡಿದ್ದರು. 

ಆರೋಪಿಗಳಿಬ್ಬರೂ ಕೊಲ್ಲೂರಿಗೆ ಸಾಗುತ್ತಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಡಿಸಿಐಬಿ ಪೊಲೀಸ್ ತಂಡ ವಂಡ್ಸೆ ಭದ್ರ ಮಹಾಕಾಳಿ ಕ್ರಾಸ್ ರಸ್ತೆಯಲ್ಲಿ ಸೆರೆಹಿಡಿದಿದ್ದಾರೆ. ಆರೋಪಿಗಳ ವಶದಲ್ಲಿದ್ದ ಪರವಾನಿಗೆ ರಹಿತ ಅಕ್ರಮ ಪಿಸ್ತೂಲ್, ಮದ್ದುಗುಂಡು, ಮೊಬೈಲ್, ಕತ್ಯಕ್ಕೆ ಬಳಸಿದ 800 ಕಾರು ಸ್ವಾಧೀನಪಡಿಸಿಕೊಳ್ಳಲಾಗಿದೆ. 

ಎಸ್ಪಿ ಡಾ.ಬೋರಲಿಂಗಯ್ಯ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಂತೋಷ್ ಕುಮಾರ್ ಮಾರ್ಗದರ್ಶನದಲ್ಲಿ ಕುಂದಾಪುರ ಡಿವೈಎಸ್ಪಿ ಎಂ.ಬಿ. ಪಾಟೀಲ್ ನಿರ್ದೇಶನದಲ್ಲಿ ಉಡುಪಿ ಡಿಸಿಐಬಿ ಪೊಲೀಸ್ ಇನ್ಸ್‌ಪೆಕ್ಟರ್ ಪ್ರವೀಣ್ ನಾಯಕ್, ಬೈಂದೂರು ವೃತ್ತ ನಿರೀಕ್ಷಕ ಸುದರ್ಶನ್, ಎಎಸ್‌ಐ ನಾರಾಯಣ, ರೋಜಾರಿಯೊ ಡಿಸೋಜ, ಸಿಬ್ಬಂದಿಯವರಾದ ಪ್ರಕಾಶ್, ಉದಯಕುಂದರ್, ಚಂದ್ರ ಶೆಟ್ಟಿ, ರತ್ನಾಕರ್, ಅಶೋಕ್, ದಿನೇಶ್, ರಾಜೇಶ್, ಸತೀಶ್, ಚಾಲಕ ಚಂದ್ರಶೇಖರ್ ಕಾರ್ಯಾಚರಣೆ ನಡೆಸಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com