ಬಸ್‌ ಕಂದಕಕ್ಕೆ: ಯುವಕ ಸಾವು

ಕುಂದಾಪುರ : ಇಲ್ಲಿನ ಹಾಲಾಡಿ ಗ್ರಾಮದಲ್ಲಿ ಖಾಸಗಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿ ಯುವಕನೊಬ್ಬ ಸಾವೀಗಿಡಾಗಿ , ಹಲವರು ಗಾಯಗೊಂಡ ಘಟನೆ ಬುಧವಾರ ಬೆಳಗ್ಗೆ ನಡೆದಿದೆ.

ಅಪಘಾತದಲ್ಲಿ ಸಾವನ್ನಪ್ಪಿದ ಯುವಕ ಶಂಕರನಾರಾಯಣದ ಸುಮಂತ್‌ (18) ಎಂದು ತಿಳಿದು ಬಂದಿದೆ.

ಘಟನೆ ವಿವರ

ಶಂಕರನಾರಾಯಣದಿಂದ ಹಾಲಾಡಿಗೆ ತೆರಳುತ್ತಿದ್ದ ಬಸ್‌ ಹಾಲಾಡಿಯ ಮರ್ಲ್ ಚಿಕ್ಕು ಅಮ್ಮನವರ ದೇವಸ್ಥಾನದ ಬಳಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ 20 ಅಡಿ ಆಳದ ಕಂದಕಕ್ಕೆ ಉರುಳಿದೆ. ಪರಿಣಾಮವಾಗಿ ಬಸ್‌ನಲ್ಲಿದ್ದ ಸುಮಂತ್‌ ಗಂಭೀರ ಗಾಯಕ್ಕೊಳಗಾಗಿ ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ

.ಸಿದ್ದಾಪುರದಿಂದ ಬೆಳಗ್ಗೆ 6.30ಕ್ಕೆ ಹೊರಟ ಬಸ್ಸು ಸುಮಾರು 18 ಪ್ರಯಾಣಿಕರನ್ನು ಹೊತ್ತು ಉಡುಪಿಯಯತ್ತ ಸಾಗುತ್ತಿದ್ದು, ಹಾಲಾಡಿ ಸೇತುವೆಯ ಬಳಿ ಚಾಲಕನ ನಿಯಂತ್ರಣ ತಪ್ಪಿದ ಬಸ್ಸು ಹಠಾತ್‌ ಬಲಭಾಗಕ್ಕೆ ಚಲಿಸಿ ಹೊಂಡಕ್ಕೆ ಬಿದ್ದಿತ್ತು. ಅನೇಕ ಮಂದಿ ಗಾಯಗೊಂಡಿದ್ದು ಅವರನ್ನು ಹಾಲಾಡಿ, ಕುಂದಾಪುರ ಹಾಗೂ ಮಣಿಪಾಲದ ಆಸ್ಪತ್ರೆಗಳಲ್ಲಿ ದಾಖಲಿಸಲಾಗಿದೆ.

ಗಾಯಗೊಂಡವರನ್ನು ಬಸ್ಸನ ಚಾಲಕ ತುಮಕೂರು ಮೂಲದ ಶಂಕರ್‌ (22), ನಿರ್ವಾಹಕ ರಾಣಿಬೆನ್ನೂರಿನ ಕಾಶೀನಾಥ್‌, ಶಂಕರನಾರಾಯಣದ ನಿವಾಸಿಗಳಾದ ನಾಗೇಂದ್ರ (36), ಶ್ರೀಕರ ಗೌಡ (22), ಶ್ಯಾಮ (40), ಪದ್ಮನಾಭ ಶೆಟ್ಟಿಗಾರ್‌ (31),ವಿಶ್ವದೀಪ (19) ಉದಯ (23) , ಪ್ರಸಾದ್‌ ಭಂಡಾರಿ (25) ಎಂದು ಗುರುತಿಸಲಾಗಿದೆ.

ಮೃತ ಪಟ್ಟ ಯುವಕ ಸುಮಂತ ಕೊಠಾರಿ ಶಂಕರನಾರಾಯಣ ಸೌಡದ ಶಂಕರ ಕೊಠಾರಿ ಅವರ ಪುತ್ರನಾಗಿರುತ್ತಾನೆ. ಪೆರ್ಡೂರಿನಲ್ಲಿ ವೆಲ್ಡರ್‌ ಕೆಲಸಕ್ಕೆ ಇತ್ತೀಚಿಗೆ ಸೇರಿಕೊಂಡಿದ್ದನು. ಪ್ರತಿ ದಿನ ಮನೆಗೆ ಬಂದು ಹೋಗುತ್ತಿದ್ದ ಈತ ಈ ದಿನ ಕೆಲಸಕ್ಕೆ ತೆರಳುವ ಸಮಯದಲ್ಲಿ ದುರ್ಘ‌ಟನೆ ಸಂಭವಿಸಿದೆ. ಈತ ತಂದೆ, ತಾಯಿ, ಓರ್ವ ತಂಗಿಯನ್ನು ಅಗಲಿದ್ದಾರೆ.


ಸ್ಥಳಕ್ಕೆ ಶಂಕರನಾರಾಯಣಾ ಠಾಣಾ ಪೊಲೀಸರು ಭೇಟಿ ನೀಡಿದ್ದಾರೆ..

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com