ಮೂವರು ಕಳ್ಳರ ಬಂಧನ; ಪುರಾತನ ವಿಗ್ರಹಗಳ ವಶ

ಕುಂದಾಪುರ : ಕೊಕ್ಕರ್ಣೆಯ ಮೊಗವೀರ ಪೇಟೆಯಲ್ಲಿರುವ ಜೈನ ಬಸದಿಯೊಂದರಿಂದ ಪುರಾತನ ಪಂಚಲೋಹದ ವಿಗ್ರಹಗಳನ್ನು ಕಳವು ಮಾಡಿದ್ದ ಕುಂದಾಪುರದ ಮೂವರು ಆರೋಪಿಗಳನ್ನು ಕುಂದಾಪುರ ವೃತ್ತ ನಿರೀಕ್ಷಕರ ತಂಡ ಬಂಧಿಸಿದ್ದು, ಅವರಿಂದ ವಿಗ್ರಹಗಳನ್ನು ವಶಪಡಿಸಿಕೊಳ್ಳಲಾಗಿದೆ.  ಕುಂದಾಪುರ ತಾಲೂಕಿನ ಜಡ್ಕಲ್‌ ಗ್ರಾಮದ ಮುದೂರಿನ ಚಂದ್ರ ನಾಯ್ಕ (28), ಮದ್ದುಗುಡ್ಡೆ ನಿವಾಸಿ ಅಶೋಕ್‌ ಮೊಗವೀರ (25) , ಹಾಗೂ ಬೈಂದೂರು ಅರೆಹೊಳೆ ಸಮೀಪದ ಹೇರೂರು ನಿವಾಸಿ ರವಿ (29) ಬಂಧಿತರು. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.  
       ಕದ್ದ ವಿಗ್ರಹಗಳನ್ನು ಮಾರಾಟಮಾಡಲು ಕುಂದಾಪುರದ ಕೆ.ಎಸ್‌.ಆರ್‌ಟಿ.ಸಿ ಬಸ್ಸು ನಿಲ್ದಾಣದ ಬಳಿ ನಿಂತಿದ್ದ ಆರೋಪಿಗಳನ್ನು ಕುಂದಾಪುರ ಪೊಲೀಸರು ಸಂಶಯಪಟ್ಟು ವಶಕ್ಕೆ ತೆಗೆದುಕೊಂಡಾಗ ವಿಷಯ ಬೆಳಕಿಗೆ ಬಂದಿದೆ.  2013ರ ಆಗಸ್ಟ್‌ ತಿಂಗಳಲ್ಲಿ ಕಳವು ನಡೆಸಲಾಗಿದೆ. ಆರೋಪಿ ಅಶೋಕ್‌ ಮೊಗವೀರ ಕೊಕ್ಕರ್ಣೆಯ ಮೊಗವೀರಪೇಟೆಯಲ್ಲಿರುವ ತಮ್ಮ ಸಂಬಂಧಿಕರ ಮನೆಯಲ್ಲಿರುವಾಗ ಆ ಮನೆಯ ಪಕ್ಕದಲ್ಲಿಯೇ ಇರುವ ಮಹಾವೀರ ಜೈನ ಬಸದಿಯಿಂದ ಇತರ ಆರೋಪಿಗಳ ಸಹಕಾರದಿಂದಿಗೆ ಕಳವು ಮಾಡುವ ಯೋಜನೆಯನ್ನು ಹಾಕಿದ್ದನು. ಅದರಂತೆ ಏಳು ಮೂರ್ತಿಗಳನ್ನು ಅಲ್ಲಿಂದ ಕಳವು ಮಾಡಿ ಪಕ್ಕದ ಹಾಡಿಯಲ್ಲಿ ಅಡಗಿಸಿಟ್ಟಿದ್ದರು.  ಈ ಬಸದಿಯಲ್ಲಿ ವರ್ಷಕ್ಕೆ ಒಂದು ಬಾರಿ ಮಾತ್ರ ಪೂಜೆ ಕೈಂಕರ್ಯಗಳು ನಡೆಯುವ ಸಂಪ್ರದಾಯವಿದ್ದು, ಪೂಜಾ ಕಾರ್ಯಕ್ರತಮದ ನಂತರ ಈ ವಿಗ್ರಹಗಳನ್ನು ಕಳವು ಮಾಡಿರುವುದರಿಂದ ಅಲ್ಲಿಗೆ ಸಂಬಂಧಪಟ್ಟವರಿಗೆ ವಿಗ್ರಹಗಳ ಕಳವು ಗಮನಕ್ಕೆ ಬಂದಿರಲಿಲ್ಲ. ಒಂದು ವರ್ಷದ ಹಿಂದೆ ಅಡಗಿಸಿಟ್ಟ ಈ ಮೂರ್ತಿಗಳನ್ನು ಹೊರತೆಗೆಯದ ಕಾರಣ ಯಾವುದೇ ಈ ವಿಷಯ ಗೌಪ್ಯವಾಗಿತ್ತು. ಗುರುವಾರ ಸಂಜೆ ಆರೋಪಿಗಳು ಕುಂದಾಪುರ ಕೆ.ಎಸ್‌.ಆರ್‌.ಟಿ.ಸಿ ಬಸ್ಸು ನಿಲ್ದಾಣದ ಬಳಿ ಅನುಮಾನಸ್ಪದವಾಗಿ ತಿರುಗಾಡುತ್ತಿದ್ದ ವೇಳ ಸಂಶಯಗೊಂಡ ಡಿವೈಎಸ್‌ಪಿ ದಿವಾಕರ್‌ ಅವರ ನೇತ್ರತ್ವದ ಪೊಲೀಸ್‌ ತಂಡ ಅವರನ್ನು ವಶಕ್ಕೆ ತೆಗೆದುಕೊಂಡು ವಿಚಾರಿಸಿದಾಗ ವಿಷಯ ಬೆಳಕಿಗೆ ಬಂದಿದೆ.          ವಶಪಡಿಸಿಕೊಳ್ಳಲಾದ ವಿಗ್ರಹಗಳು ಸುಮಾರು 400ರಿಂದ 500 ವರ್ಷಕ್ಕೂ ಹಿಂದಿನದಾಗಿದ್ದು, ಸುಮಾರು ನಾಲ್ಕು ಕೆ.ಜಿ.ಗಿಂತಲೂ ಹೆಚ್ಚು ತೂಕವಿರುವ ಬೆಲೆಬಾಳುವ ಪಂಚಲೋಹದ ಏಳು ಪಂಚಲೋಹದ ಜೈನ ತೀರ್ಥಂಕರರ‌ ಈ ವಿಗ್ರಹಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳ ಮೌಲ್ಯವನ್ನು ಪ್ರಾಚ್ಯವಸ್ತು ಪರಿಣಿತರು ಅಥವಾ ಲೋಹ ತಜ್ಞರು ನಿಧರಿಸಿಬೇಕಾಗಿರುತ್ತದೆ ಎಂದು ಪೊಲೀಸ‌ರು ತಿಳಿಸಿದ್ದಾರೆ.  ದಾಖಲಾಗದ ಪ್ರಕರಣ:  ವರ್ಷಕ್ಕೊಮ್ಮೆ ನಡೆಯುವ ಪೂಜಾ ಕಾರ್ಯಕ್ರಮದ ನಂತರ ಈ ಕಳವು ನಡೆದಿರುವುದರಿಂದ ಪ್ರಕರಣ ಬಸದಿಯ ಸಂಬಂಧಪಟ್ಟವರಿಗೆ ಈ ಕಳವಿನ ಬಗ್ಗೆ ತಿಳಿಸುಬಂದಿರುವುದಿಲ್ಲ. ಆದ್ದರಿಂದ ಈತನಕ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರಲಿಲ್ಲ. ಇದರ ಲಾಭವನ್ನು ಪಡೆದ ಆರೋಪಿಗಳು ಕುಂದಾಪುರ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಆರೋಪಿಗಳಿಂದ ಈ ಬಗ್ಗೆ ಮಾಹಿತಿಗಳನ್ನು ಪಡೆದುಕೊಂಡ ಕುಂದಾಪುರ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.  ಬಂಧಿತ ಜಡ್ಕಲ್‌ ಗ್ರಾಮದ ಮುದೂರು ಶೇಡಿಗುಂಡಿಯ ಚಂದ್ರ ನಾಯ್ಕ ಈ ಹಿಂದೆ ಸಿಗಂಧೂರು ಬಳಿಯ ಬ್ಯಾಕೋಡು ಬಳಿಯ ಚಂದ್ರನಾಥ ಬಸದಿಯಲ್ಲಿ ಅತಿ ಪುರಾತನ ಕಾಲದ ವಿಗ್ರಹಗಳನ್ನು ಕಳವು ಮಾಡಿದ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ.  ಕುಂದಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com