ಸುಪಾರಿ:7 ಮಂದಿ ಬಂಧನ. ನಗದು, ಆಯುಧ ವಶ

ಕುಂದಾಪುರ: ಇಲ್ಲಿನ ಗಾಂಧಿ ಮೈದಾನದ ಎದುರು ಕ್ವಾಲೀಸ್ ವಾಹನವೊಂದರಲ್ಲಿ ಕುಳಿತು ಸುಪಾರಿ ಹಣದ ಸಲುವಾಗಿ ಮಾತುಕತೆ ನಡೆಸಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಕುಂದಾಪುರ ಸರ್ಕಲ್ ಇನ್ಸ್‌ಪೆಕ್ಟರ್ ದಿವಾಕರ್ ಎಸ್ಪಿ ಮಾರ್ಗದರ್ಶನದಂತೆ ದಾಳಿ ನಡೆಸಿ 7 ಮಂದಿಯನ್ನು ಬಂಧಿಸಿದ್ದಾರೆ. 

ಬಂಧಿತರು ಸಯ್ಯದ್ ಅಯಾಜ್ (32) ಭದ್ರಾವತಿ, ಗೌಸ್ ಮೊಯ್ದೀನ್ (38) ಭದ್ರಾವತಿ, ರಿಯಾಜ್ (32) ಭದ್ರಾವತಿ, ವಿನೋದ್‌ರಾಜ್ (26) ಶಾಂತಿನಿಕೇತನ ವಡೇರಹೋಬಳಿ, ಗುರುರಾಜ್ ಶೆಟ್ಟಿ, ರಫೀಕ್, ಗಣೇಶ್ ಪೂಜಾರಿ ಎಂದು ಗುರುತಿಸಲಾಗಿದೆ. ಸುಪಾರಿ ಹಣ ರೂ. 4 ಲಕ್ಷ, ನಾಲ್ಕು ಮೊಬೈಲ್, 2 ತಲವಾರು, ಕ್ವಾಲೀಸ್ ವಾಹನ ಸ್ವಾಧೀನಪಡಿಸಿಕೊಳ್ಳಲಾಗಿದೆ. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com