ಮಾರಾಣಾಂತಿಕ ಹಲ್ಲೆ ಆರೋಪಿಗಳು ದೋಷ ಮುಕ್ತಿ

ಕುಂದಾಪುರ : ಮಾರಾಣಾಂತಿಕ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದ ಆರೋಪಿಗಳನ್ನು ಕುಂದಾಪುರ ನ್ಯಾಯಾಲಯವು ದೋಷ ಮುಕ್ತಿ ಗೊಳಿಸಿದೆ.
     ಕುಂದಾಪುರ ತಾಲೂಕಿನ ನೇರಳಕಟ್ಟೆಯ ನಿವಾಸಿಗಳಾದ ರಾಮ ಪೂಜಾರಿ ಭಾಸ್ಕರ ಪೂಜಾರಿ ಹಾಗೂ ಹೆರಿಯ ಪೂಜಾರಿ ಇವರಿಗೆ ನೇರಳಕಟ್ಟೆಯ ದೇವಸ್ಥಾನದ ಬಳಿ ಆರೋಪಿಗಳಾದ ಉದಯ ಮೊಗವೀರ, ಕೊಡ್ಲಾಡಿಯ ಸದಾಶಿವ ಶೆಟ್ಟಿ, ಅಶೋಕ ಶೆಟ್ಟಿ ಹಾಗೂ ಕರುಣಾಕರ ಶೆಟ್ಟಿ, ದೇವಿ ಪ್ರಸಾದ ಶೆಟ್ಟಿ ಹಾಗೂ ಭಾಸ್ಕರ ಶೆಟ್ಟಿ ಅವರುಗಳು ಮಾರಾಕಾಸ್ತ್ರಗಳಿಂದ ಹಾಗೂ ಬಾಟಲಿಗಳಿಂದ ಹಲ್ಲೆ ನಡೆಸಿದ್ದಾರೆಂದು ಕುಂದಾಪುರ ಪೊಲೀಸ್‌ಠಾOಯಲ್ಲಿ ದೂರು ದಾಖಲಾಗಿತ್ತು.

ಪೊಲೀಸರು ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಪ್ರಕರಣಕ್ಕೆ  ಕೈಗೆತ್ತಿಕೊಂಡ ನ್ಯಾಯಾಲಯ ಆರೋಪಿಗಳು ನಿರ್ದೋಷಿಗಳೆಂದು ದೋಷಮುಕ್ತಿಗೊಳಿಸಿದೆ. ಆರೋಪಿಗಳ ಪರವಾಗಿ ಕುಂದಾಪುರ ನ್ಯಾಯಾವಾದಿ ಹಂದಕುಂದ ಅಶೋಕ ಶೆಟ್ಟಿ ವಾದಿಸಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com