ಬಸದಿ ಕಳವು ಆರೋಪಿ ಕುಂದಾಪುರ ಪೊಲೀಸ್‌ ಕಸ್ಟಡಿಗೆ

ಕುಂದಾಪುರ: ಜೈನ ಬಸದಿಗೆ ಸಂಬಂಧಪಟ್ಟ ಸಿದ್ಧಾಂತ ಮಂದಿರದ ನೂರ್ತಿಗಳನ್ನು ಕಳವು ಮಾಡಿದ ಪ್ರಮುಖ ಆರೋಪಿ ಒಡಿಶಾ ಮೂಲದ ಛತ್ತಿಸ್‌ಗಢದ ಸಂತೋಷ್‌ ದಾಸ್‌ ಯಾನೆ ಘನಶ್ಯಾಮ್‌ ದಾಸ್‌ನನ್ನು ಕುಂದಾಪುರದಲ್ಲಿ ಖಾರ್ವಿಕೇರಿಯ ಮಹಾಕಾಳಿ ದೇವಸ್ಥಾನದ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಸೋಮವಾರ ಕುಂದಾಪುರ ಪೊಲೀಸ್‌ ಕಸ್ಟಡಿಗೆ ಒಪ್ಪಿಸಲಾಗಿದೆ.

ಸೋಮವಾರ ಸಂಜೆ ಆರೋಪಿಯನ್ನು ಕುಂದಾಪುರ ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ತನಿಖೆಯ ಅಗತ್ಯ ಇರುವುದರಿಂದ ಆರೋಪಿಯನ್ನು ತಮ್ಮ ವಶಕ್ಕೆ ಒಪ್ಪಿಸಬೇಕು ಎಂದು ಕುಂದಾಪುರ ವೃತ್ತ ನಿರೀಕ್ಷಕ ದಿವಾಕರ್‌ ಅವರು ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದ್ದರು. ಪೊಲೀಸರ ಮನವಿಯನ್ನು ನ್ಯಾಯಾಲಯ ಪುರಸ್ಕರಿಸಿದೆ.

2010ರಲ್ಲಿ ಖಾರ್ವಿಕೇರಿಯ ಶ್ರೀ ಮಹಾಂಕಾಳಿ ದೇವಸ್ಥಾನದಲ್ಲಿ ಚಿನ್ನಾಭರಣಗಳ ಕಳವು ಆಗಿದ್ದು, ಈ ಪ್ರಕರಣದ ಬಗ್ಗೆ ಯಾವುದೇ ಸುಳಿವು ಸಿಗದ ಹಿನ್ನಲೆಯಲ್ಲಿ ಪೊಲೀಸರು 2011ರಲ್ಲಿ ಪತ್ತೆಯಾಗದ ಪ್ರಕರಣ ಎಂದು ನ್ಯಾಯಾಲಯಕ್ಕೆ 'ಸಿ' ವರದಿಯನ್ನು ಸಲ್ಲಿಸಿದ್ದರು.

ಘನಶ್ಯಾಂ ದಾಸ್‌ ಮೂಡುಬಿದಿರೆಯ ಜೈನ ಬಸದಿಯ ಸಿದ್ಧಾಂತ ದರ್ಶನ ಮಂದಿರದ ಮೂರ್ತಿಗಳ ಕಳವು ಪ್ರಕರಣದ ವಿಚಾರಣೆಯ ವೇಳೆ ಇತರ ಪ್ರಕರಣಗಳ ನಡುವಿನಲ್ಲಿ ಕುಂದಾಪುರ ಶ್ರೀ ಮಹಾಕಾಳಿ ದೇವಸ್ಥಾನದ ಕಳವು ಪ್ರಕರಣದಲ್ಲಿ ಭಾಗಿಯಾಗಿದ್ದೇನೆ ಎಂದು ತಪ್ಪೊಪ್ಪಿಕೊಂಡ ಹಿನ್ನಲೆಯಲ್ಲಿ ಹೆಚ್ಚಿನ ತನಿಖೆಗಾಗಿ ಕುಂದಾಪುರ ಪೊಲೀಸರು ಎರಡು ದಿನಗಳ ಮಟ್ಟಗೆ ಕಸ್ಟಡಿಗೆ ತೆಗೆದುಕೊಂಡಿದ್ದಾರೆ.

ನಂತರ 2013ರಲ್ಲಿ ಮೂಡುಬಿದ್ರೆ ಕಳವಿಗೆ ಸಂಬಂಧಿಸಿದಂತೆ ಘನಶ್ಯಾಮ್‌ನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದಾಗ ಕುಂದಾಪುರದಲ್ಲಿ ಕಳವು ಮಾಡಿದ ಬಗ್ಗೆ ತಪ್ಪೊಪ್ಪಿಕೊಂಡಿದ್ದರಿಂದ ಪುನಃ ಪ್ರಕರಣದ ತನಿಖೆಯನ್ನು ಮುಂದುವರಿಸಲು ಅವಕಾಶವಾಗಿದೆ. ಇಲ್ಲಿ ಕಳವು ಮಾಡಲಾದ ಚಿನ್ನಾಭರಣಗಳನ್ನು ಆತ ಒರಿಸ್ಸಾದಲ್ಲಿ ಮಾರಾಟ ಮಾಡಿರುವುದಾಗಿ ಹೇಳಿಕೆಯನ್ನು ಅಂದು ನೀಡಿದ್ದನು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com