ಕುಂದಾಪುರ : ಕೋಟೇಶ್ವರ ಬೀಜಾಡಿ ಬೆ„ಪಾಸ್ ಬಳಿ ಟಾಟಾ ಏಸ್ ಗೂಡ್ಸ್ ವಾಹನವೊಂದು ಢಿಕ್ಕಿಯಾದ ಪರಿಣಾಮ ಬೆ„ಕ್ ಸವಾರ ಸುಪ್ರಸನ್ನ ಗಂಭಿರವಾಗಿ ಗಾಯಗೊಂಡಿದ್ದಾರೆ.
ಕೋಟದಿಂದ ನಾವುಂದಕ್ಕೆ ಮೀನುಗಳನ್ನು ಸಾಗುತ್ತಿದ್ದ ಟಾಟಾಏಸ್ ವಾಹನ ಬೀಜಾಡಿ ಜಂಕ್ಷನ್ನಲ್ಲಿ ಕುಂಭಾಸಿಯೆಡೆಗೆ ಸಾಗುತ್ತಿದ್ದ ಬೆ„ಕ್ ಎದುರಿನಿಂದ ಢಿಕ್ಕಿಹೊಡೆದಿತ್ತು. ರಸ್ತೆಗೆ ಬಿದ್ದ ಬೆ„ಕ್ ಸವಾರ ಗಂಭೀರ ಗಾಯವಾಗಿದ್ದು, ಕೋಟೇಶ್ವರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕುಂದಾಪುರ ಸಂಚಾರಿ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.