ಕೊಲ್ಲೂರು: ದೇವಳ ಗಡಿಯೊಳಗೆ ಸ್ವಾಮೀಜಿ ಸಮಾಧಿ; ಪೂಜೆ ಸ್ಥಗಿತ

ಕೊಲ್ಲೂರು:  ಇಲ್ಲಿನ ಕೊಲ್ಲೂರು ದೇವಾಲಯದ ಅನತಿ ದೂರದಲ್ಲಿರುವ ನಿತ್ಯಾನಂದ ಆಶ್ರಮದ ಶ್ರೀ ವಿಮಲಾನಂದ (ಅವಧೂತ ಶ್ರೀ ನಿತ್ಯಾನಂದ ಸ್ವಾಮೀಜಿ ಅವರ ಕೊನೆಯ ನೇರ ಶಿಷ್ಯ) ಸೋಮವಾರ ಮಧ್ಯಾಹ್ನ ನಿಧನರಾದರು.  ಆಶ್ರಮದ ಸಂಪ್ರದಾಯದಂತೆ, ಸನ್ಯಾಸಿಯಾಗಿದ್ದ ಶ್ರೀವಿಮಲಾನಂದರ ದೇಹವನ್ನು ಆಶ್ರಮದ ಬಳಿ ಸಮಾಧಿ ಮಾಡಲು ನಿರ್ಧರಿಸಲಾಯಿತು. ಆದರೆ ಇದಕ್ಕೆ ಕೊಲ್ಲೂರು ದೇವಾಲಯದಿಂದ ವಿರೋಧ ವ್ಯಕ್ತವಾಯಿತು. ಆಶ್ರಮ ದೇವಾಲಯದ ಗಡಿಯೊಳಗಿದೆ, ಆದ್ದರಿಂದ ಗಡಿಯೊಳಗೆ ಸಮಾಧಿ ಮಾಡುವುದರಿಂದ ದೇವಾಲಯ ಸೂತಕದಿಂದ ಮೈಲಿಗೆಯಾಗುತ್ತದೆ, ಆದ್ದರಿಂದ ಗಡಿಯ ಹೊರಗೆ ಸಮಾಧಿ ಮಾಡಬೇಕು ಎಂಬುದು ದೇವಾಲಯದ ವ್ಯವಸ್ಥಾಪನ ಮಂಡಳಿ ವಾದ. ಆದರೆ ಆಶ್ರಮಯದ ಸಂಪ್ರದಾಯ ಪಾಲಿಸಬೇಕು ಎನ್ನುವುದು ಆಶ್ರಮದ ಟ್ರಸ್ಟಿನ ವಾದ. ಸೋಮವಾರ ಈ ವಾದ ಬಗೆಹರಿಯದೆ, ಸೂತಕದಲ್ಲಿ ಪೂಜೆ ಮಾಡುವುದಕ್ಕಾಗುವುದಿಲ್ಲ ಎಂಬ ಕಾರಣಕ್ಕೆ ತಾಯಿ ಮೂಕಾಂಬಿಕೆಗೆ ರಾತ್ರಿ ಪೂಜೆ ರದ್ದುಗೊಳಿಸಲಾಯಿತು, ಮಂಗಳವಾರ ಮುಂಜಾನೆಯ ಪೂಜೆ ಮಾಡಲಾಗಲಿಲ್ಲ. 
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com