ಮರವಂತೆ ಬೀಚ್‌ನಲ್ಲಿ ಹೂತುಹೋದ ಕಾರು

ಮರವಂತೆ: ಬೀಚ್‌ನಲ್ಲಿ ಕಾರಿನಲ್ಲಿ ವಿಹರಿಸಿದ ಬಳಿಕ ಸಮುದ್ರದ ತೀರ ಹತ್ತಿರ ಸಾಗಿದಾಗ ಕಾರಿನ ಚಕ್ರ ಮರಳಿನಲ್ಲಿ ಹೂತುಹೋಗಿ ಸ್ಥಗಿತಗೊಂಡ ಘಟನೆ ಇತ್ತಿಚಿಗೆನಡೆದಿದೆ.

ಈ ಕಾರು ಮಂಗಳೂರಿನಿಂದ ಹಳಗೇರಿಯ ಕಾರ್ಯಕ್ರಮಕ್ಕೆ ಬಂದಿದ್ದ ವ್ಯಕ್ತಿಗೆ ಸೇರಿದ್ದು, ಸಮಾರಂಭ ಮುಗಿಸಿ ರಾತ್ರಿ ಹಿಂತಿರುಗುತ್ತಿದ್ದಾಗ ಅದರಲ್ಲಿದ್ದ ಮೂವರು ಸ್ನೇಹಿತರು ಕಾರಿನೊಂದಿಗೆ ಬೀಚ್‌ಗೆ ಹೋದಾಗ ಅದರ ಚಕ್ರ ಮರಳಿನಲ್ಲಿ ಹೂತು ಹೋಯಿತು.

ಕಾರನ್ನು ಮೇಲೆತ್ತಲಾಗದ ಅವರು ರಾತ್ರಿಯನ್ನು ತ್ರಾಸಿಯಲ್ಲಿ ಕಳೆದು ಬೆಳಗ್ಗೆ ಸ್ಥಳಕ್ಕೆ ಬಂದರು. ಅನಾಥ ಸ್ಥಿತಿಯಲ್ಲಿದ್ದ ಅದನ್ನು ಕಂಡು ನೂರಾರು ಜನರು ಅಲ್ಲಿ ಸೇರಿದ್ದರು. ಅಂತಿಮವಾಗಿ ಯುವಕರ ತಂಡವೊಂದು ಹೂತು ಹೋಗಿದ್ದ ಕಾರನ್ನು ಮೇಲಕ್ಕೆತ್ತಿ ಹೆದ್ದಾರಿ ತಲಪಿಸುವಲ್ಲಿ ಯಶಸ್ವಿಯಾಯಿತು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com