ಬೈಂದೂರು: ಇಲ್ಲಿನ ಜ್ಯೂನಿಯರ್ ಕಾಲೇಜಿನಲ್ಲಿ ದ್ವಿತಿಯ ಪಿಯುಸಿಯಲ್ಲಿ ವ್ಯಾಸಂಗ ನಾಡುತ್ತಿದ್ದ ಮಮತಾ (17) ಅವರು ತನ್ನ ಮನೆಯ ಕೋಣೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ವಿದ್ಯಾಭ್ಯಾಸದ ಕಡೆಗೆ ಸರಿಯಾಗಿ ಗಮನ ಹರಿಸದೇ ಇರುವುದನ್ನು ಗಮನಿಸಿದ ಆಕೆಯ ತಂದೆ ತಾಯಿಯರು ಬುದ್ದಿ ಮಾತು ಹೇಳಿದ್ದು, ಇದರಿಂದ ಮಮತಾಳು ಮಧ್ಯಾಹ್ನ ಊಟ ಮಾಡಿದ ನಂತರ ಕೋಣೆಯ ಒಳಗೆ ಮಲಗಲು ಹೋಗಿ ಫ್ಯಾನಿಗೆ ಚೂಡಿದಾರ್ನ ಶಾಲನ್ನು ಕಟ್ಟಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ್ದಳು.
ನೇಣುಬಿಗಿದುಕೊಂಡು ಒದ್ದಾಡುತ್ತಿದ್ದವಳನ್ನು ನೋಡಿದ ಮನೆಯವರು ಕೂಡಲೇ ಆಸ್ಪತ್ರೆಗೆ ಕರೆದೋಯ್ದರಾದರೂ ದಾರಿ ಮಧ್ಯೆ ಮಮತಾ ಮೃತಪಟ್ಟಿರುತ್ತಾರೆ. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.