ಬ್ರಹ್ಮಾವರ: ತಂದೆ ಕಿರುಕುಳ ನೀಡುತ್ತಿದ್ದಾರೆ ಎಂದು ಮುಂಬೈ ಮೂಲಕ ಸಂಬಂದಿಕರ ಮನೆಗೆ ತೆರಳಲು ರೈಲಿನಲ್ಲಿ ಪ್ರಯಾಣಿಸುತ್ತಿದ್ದ 14 ವರ್ಷದ ಬಾಲಕನನ್ನು ಕೊಂಕಣ ರೈಲ್ವೇ ಅಧಿಕಾರಿಗಳು ರಕ್ಷಿಸಿ ಪೋಷಕರಿಗೆ ಹಸ್ತಾಂತರಿಸಿದ್ದಾರೆ.
ಪರೀಕ್ಷೆಯಲ್ಲಿ ಉತ್ತಮ ನಿರ್ವಹಣೆ ತೋರಲಿಲ್ಲ ಹಾಗೂ ಸಂಜೆ ಹೊತ್ತು ಮುಕ್ತವಾಗಿರಲು ಮನೆಯಲ್ಲಿ ಬಿಡಲಿಲ್ಲ ಎಂದು ಬ್ರಹ್ಮಾವರದ ಖಾಸಗಿ ಶಾಲಾ ವಿದ್ಯಾರ್ಥಿ ಆಕಾಶ್ ಮಂಗಳವಾರ ಮನೆ ಬಿಟ್ಟು ಹೊರಟಿದ್ದ. ನಂತರ ಇಬ್ಬರಿಗೂ ಬುದ್ದಿ ಹೇಳಿ ಕಳುಹಿಸಿಕೊಡಲಾಯಿತು.