ವಾರಾಹಿ ಕಾಲುವೆ ನಿರ್ಮಾಣಕ್ಕೆ ಅಡ್ಡಿ, ದೂರು ದಾಖಲು

ಸಿದ್ದಾಪುರ: ಸಿದ್ದಾಪುರ ಗ್ರಾ. ಪಂ. ವ್ಯಾಪ್ತಿಯ 74ನೇ ಉಳ್ಳೂರು ಗ್ರಾಮದ ತೆಂಕೂರು ಬಳಿ ವಾರಾಹಿ ಯೋಜನೆಯ ಕಾಲುವೆ ನಿರ್ಮಾಣಕ್ಕೆ ಸ್ಥಳೀಯ ನಿವಾಸಿಗಳು ಆಡ್ಡಿ ಪಡಿಸಿದ್ದಾರೆ ಎಂದು ವಾರಾಹಿ ಯೋಜನೆಯ ಚೀಪ್‌ ಇಂಜಿನಿಯರ್‌ ಆರ್‌. ನಟರಾಜ್‌ ಅವರು ಶಂಕರನಾರಾಯಣ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

 74ನೇ ಉಳ್ಳೂರು ಗ್ರಾಮದ ತೆಂಕೂರು ಬಳಿ ವಾರಾಹಿ ಯೋಜನೆಯ ಕಾಲುವೆ ನಿರ್ಮಾಣಗೊಳ್ಳುತ್ತಿರುವುದರಿಂದ ಬುಧವಾರ ಬೆಳಗ್ಗೆ ವಾರಾಹಿ ಯೋಜನೆಯ ಚೀಪ್‌ ಇಂಜಿನಿಯರ್‌ ಆರ್‌. ನಟರಾಜ್‌ ಅವರು ಇತರ ಇಲಾಖಾಧಿಕಾರಿಗಳೊಂದಿಗೆ ಸ್ಥಳಕ್ಕೆ ಆಗಮಿಸಿದರು. ಆ ಸಂದರ್ಭದಲ್ಲಿ ಇಲಾಖಾಧಿಕಾರಿಗಳು ಸಾರ್ವಜನಿಕ ರಸ್ತೆ ಬಂದ್‌ ಮಾಡಲು ಮುಂದಾದ್ದಾಗ, ಅಲ್ಲಿಯ ನಿವಾಸಿಗಳುಳಿಗೆ ರಸ್ತೆಗಳು ಬಂದಾಗುತ್ತಿರುವುದನ್ನು ಆಕ್ಷೇಪಿಸಿ, ಅಧಿಕಾರಿಗಳಿಗೆ ಘೇರಾವು ಹಾಕಿದರು. ಇದರಿಂದಾಗಿ ಇಲಾಖಾಧಿಗಳ ಹಾಗೂ ಸ್ಥಳೀಯರ ನಡುವೆ ಮಾತಿನ ಚಕಮಕಿ ನಡೆದ ಪರಿಣಾಮ ಈ ಘಟನೆಯು ಸಂಭವಿಸಿರುತ್ತದೆ. ಈ ಹಿನ್ನಲೆಯಲ್ಲಿ ಹಿರಿಯ ಅಧಿಕಾರಿ ಆರ್‌. ನಟರಾಜ್‌ ಅವರು ಕರ್ತವ್ಯಕ್ಕೆ ಅಡ್ಡಿ ಹಾಗೂ ಹಲ್ಲೆ ನಡೆಸಲು ಮುಂದಾಗಿದ್ದಾರೆ ಎಂದು ದೂರು ದಾಖಲಿಸಿದರು. ಶಂಕರನಾರಾಯಣ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದು, ತನಿಖೆ ನಡೆಯುತ್ತಿದೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com