ನಾಶಿಕ್: ಸಹೋದರ ಹಾಗೂ ಚಿಕ್ಕಪ್ಪ ಸೇರಿದಂತೆ ಒಟ್ಟು ನಾಲ್ಕು ಮಂದಿ 14 ವರ್ಷ ಪ್ರಾಯದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಇಲ್ಲಿನ ಮಂಗಳವಾಡಿ ಕೊಳೆಗೇರಿಯಲ್ಲಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಆರೋಪಿಗಳಲ್ಲಿ 3 ಮಂದಿಯನ್ನು ಬಂಧಿಸಲಾಗಿದೆ.
ಕಳೆದ ಎಪ್ರಿಲ್ 27ರಿಂದ ಮೇ 8ರ ವರೆಗಿನ ಅವಧಿಯಲ್ಲಿ ಬಾಲಕಿಯು ಚೋಪ್ಡಾ ಲಾನ್ಸ್ ಸಮೀಪದ ಹಳೇ ಗಂಗಾಪುರ ನಾಕಾ ಪ್ರದೇಶದ ಕೊಳೇಗೇರಿಯಲ್ಲಿನ ತನ್ನ ಮನೆಯಲ್ಲಿ ಒಂಟಿಯಾಗಿದ್ದಾಗ ಆಕೆಯನ್ನು ಹೊಡೆದು ಬಡಿದು ಆಕೆಯ ಮೇಲೆ ರೇಪ್ ಎಸಗಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಕಿಯ ತಾಯಿಯು ವರ್ಷದ ಹಿಂದಷ್ಟೇ ತೀರಿಕೊಂಡಿದ್ದು ಇದರ ದುರ್ಲಾಭವನ್ನು ಆರೋಪಿಗಳು ಪಡೆದುಕೊಂಡು ಆಕೆಯ ಮೇಲೆ ರೇಪ್ ಎಸಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಈ ಪ್ರಕರಣದ ಬಂಧಿತರೆಂದರೆ ರಾಜು ದಾರುಪ್ಪ ಮಾಳ (22, ಬಾಲಕಿಯ ಚಿಕ್ಕಪ್ಪ), ನರೇಶ್ ಭಂಡಾರಿ (22) ಮತ್ತು ಪ್ರಭಾಕರ ಹರಿಜನ (22 - ಇವರಿಬ್ಬರೂ ಬಾಲಕಿಯ ಸಹೋದರನ ಸ್ನೇಹಿತರು ಮತ್ತು ಇದೇ ಕೊಳೆಗೇರಿಯ ವಾಸಿಗಳು ).