ಕೊಲೆ ಯತ್ನ: ಆರೋಪಿಗಳಿಗೆ ನಿರೀಕ್ಷಣಾ ಜಾಮೀನು

ಕುಂದಾಪುರ : ಆಸ್ತಿ ವಿವಾದದ ಕುರಿತು ಕೊಲೆಗೆ ಯತ್ನಿಸಿದ ಐವರು ಆರೋಪಿಗಳಿಗೆ ಕುಂದಾಪುರದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನಿರೀಕ್ಷಣಾ ಜಾಮೀನು ನೀಡಿದೆ.

2014ನೇ ಎಪ್ರಿಲ್‌ 7ರಂದು ರಾತ್ರಿ 8 ಗಂಟೆಗೆ ಆನಗಳ್ಳಿಯ ರಾಜೇಶ್‌ ಎಂಬಾತ ತನ್ನ ಮಾವ ರಾಘವೇಂದ್ರ ನಾಯ್ಕರಿಗೆ ಕರೆ ಮಾಡಿ ಜಾಗದ ವಿಚಾರದ ತಕರಾರುಗಳನ್ನು ಸರಿ ಮಾಡಿಕೊಳ್ಳುವ ಬಗ್ಗೆ ಬರ ಹೇಳಿದ್ದನು. ಅದರಂತೆ ರಾಘವೇಂದ್ರರು ಆನಗಳ್ಳಿಯ ಮನೆಗ ಬಂದಾಗ ಅಜಿತ್‌, ರಾಜೇಶ್‌, ಪ್ರದೀಪ್‌, ಸತೀಶ್‌ ಮತ್ತು ಆಶಾ ಎಂಬುವವರು ಸೇರಿಕೊಂಡು ಕೊಲೆಮಾಡುವ ಉದ್ಧೇಶದಿಂದ ಮುಂದಾಗಿದ್ದರಲ್ಲದೇ ಅಜಿತ್‌ ಎನ್ನುವವ ರಾಘವೇಂದ್ರರ ಕುತ್ತಿಗೆಯನ್ನು ಕಡಿಯಲು ಹೋಗಿ ಕೈ ಯ ಬೆರಳು ಕತ್ತರಿಸಿ ಹೋಗಿದ್ದಲ್ಲದೇ, ಎಡ ಕಾಲಿಗೂ ಕೂಡಾ ಕತ್ತಿಯಿಂದ ಕಡಿದಿದ್ದ ಎಂದು ಆರೋಪಿಸಲಾಗಿತ್ತು. ಆರೋಪಿಗಳ ವಿರುದ್ಧ ಕುಂದಾಪುರ ಪೊಲೀಸರು ದಂಡ ಪಕ್ರಿಯ ಸಂಹಿತೆ ಕಲಂ 307 ರಂತೆ ಪ್ರಕರಣ ದಾಖಲಿಸಿದ್ದರು.

ಆರೋಪಿಗಳು ಕುಂದಾಪುರದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನಿಗಾಗಿ ಅರ್ಜಿಯನ್ನು ಸಲ್ಲಿಸಿದ್ದರು. ಈ ಘಟನೆಯಲ್ಲಿ ಕಂಡುಕೊಂಡ ಆರೋಪಿಗಳು ಮುಗªರಾಗಿರುವುದಲ್ಲದೇ ಅವರು ದೂರುದಾರರ ಸಂಬಂಧಿಕರೂ ಆಗಿರುತ್ತಾರೆ. ಅವರ ನಡುವೆ ಜಮೀನಿನ ವಿವಾದ ಇದ್ದು, ಆರೋಪಿಗಳ ವಿರುದ್ಧ ಪ್ರಕರಣವನ್ನು ದಾಖಲಿಸಬೇಕು ಎನ್ನುವ ಒಂದೇ ಉದ್ಧೇಶದಿಂದ ದೂರುದಾರರು ಪೊಲೀಸರಿಗೆ ಸುಳ್ಳು ದೂರನ್ನು ನೀಡಿರುತ್ತಾರೆ ಅಲ್ಲದೇ ದೂರುದಾರರು ನೀಡಿರುವ ದೂರಿನಲ್ಲಿ ಭಾರತದಂಡ ಸಂಹಿತೆ ಕಲಂ 307 ಕ್ಕೆ ಅನ್ವಯವಾಗುವಂತಹ ಯಾವುದೇ ಅಂಶಗಳು ಇರುವುದಿಲ್ಲ ಎಂದು ವಾದಿಸಲಾಗಿತ್ತು.

ಅರ್ಜಿದಾರರ ಪರ ನ್ಯಾಯಾವಾದಿಗಳ ವಾದವನ್ನು ಎತ್ತಿ ಹಿಡಿದ ಕುಂದಾಪುರದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಎಂ.ಕೆ‌ನುಮಯ್ಯ ನವರು ಎಲ್ಲಾ 5 ಜನ ಆರೋಪಿಗಳಿಗೆ ನಿರೀಕ್ಷಣಾ ಜಾಮೀನನ್ನು ಮಂಜೂರು ಮಾಡಿರುತ್ತಾರೆ. ಆರೋಪಿಗಳ ಪರ ಕುಂದಾಪುರದ ನಆಯಯವಾದಿಗಳಾದ ಬನ್ನಾಡಿ ಸೋಮನಾಥ ಹೆಗ್ಡೆ ಮತ್ತು ಮಚ್ಚಟ್ಟು ರವಿ ಶೆಟ್ಟಿ ವಾದಿಸಿದ್ದರು.


ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com