ಕೋಟೇಶ್ವರ : ರಜಾ ದಿನ ಸವಿಯಲು ಬೀಜಾಡಿಯ ಕಡಲ ತಡಿಗೆ ಆಗಮಿಸಿದ ತಂಡ ಒಂದರ ಜೀಪ್ ಸಮುದ್ರದ ಅಲೆಗಳಿಗೆ ಸಿಲುಕಿ ಮುಳುಗುವ ಸಂಧರ್ಭದಲ್ಲಿ ಪರಿಸ್ಥಿತಿಯ ಸೂಕ್ಷ್ಮತೆಯನ್ನು ಅರಿತ ಸ್ಥಳೀಯರು ಸ್ಥಳಕ್ಕೆ ಹಗ್ಗ ಸಮೇತ ಧಾವಿಸಿ ಜೀಪ್ಗೆ ಹಗ್ಗವನ್ನು ಕಟ್ಟಿ ಎಳೆದು ದಡಕ್ಕೆ ಸೇರಿಸಿದ ಘಟನೆ ಮೇ 6ರಂದು ಸಂಜೆ 7 ಘಂಟೆಗೆ ನೆಡೆದಿದೆ.
ಬೆಂಗಳೂರಿನ ಕುಟುಂಬವೊಂದರ ಸದಸ್ಯರು ಮಹೇಂದ್ರ ಜೈಲೋ ಜೀಪ್ ಒಂದರಲ್ಲಿ ಬೀಜಾಡಿಯ ಕಡಲ ಕಿನಾರೆಗೆ ಆಗಮಿಸಿದರು. ಸಮುದ್ರದ ಹೊ„ಗೆ ಮಣ್ಣಿನ ಬಗ್ಗೆ ಮಾಹಿತಿ ಇಲ್ಲದ ತಂಡವು ಏಕಾಏಕಿ ಜೀಪ್ನ್ನು ಸಮುದ್ರದತ್ತ ಚಲಾಯಿಸಿದರು.
ಕಡಲ ಕಿನಾರೆಯ ಒಂದು ಭಾಗದಿಂದ ಸಾಗುತ್ತಿದ್ದ ಜೀಪ್ ಚಾಲಕನ ನಿಯಂತ್ರಣ ತಪ್ಪಿ ಹೊ„ಗೆಯಲ್ಲಿ ಹೂತು ಸಮುದ್ರದಲ್ಲಿ ಸಿಕ್ಕಿ ಬಿತ್ತು. ಭಾರೀ ಗಾತ್ರದ ಸಮುದ್ರದ ಅಲೆಗಳು ಜೀಪ್ನತ್ತ ರಭಸದಿಂದ ಬರುತ್ತಿದ್ದಂತೆ ಬೆದರಿದ ತಂಡವು ಸಹಾಯಕ್ಕಾಗಿ ಅಲ್ಲಿನ ನಿವಾಸಿಗಳನ್ನು ಕೋರಿಕೊಂಡಾಗ ಅಸುಪಾಸಿನ ನಿವಾಸಿಗಳಾದ ಮೀನುಗಾರ ಯುವಕರು ಕೂಡಲೆ ಸ್ಥಳಕ್ಕೆ ಧಾವಿಸಿ ವಾಹನವನ್ನು ಮೇಲೆತ್ತಿದರು.
ಮೋಜಿಗಾಗಿ ಸಮುದ್ರ ರಾಜನೊಡನೆ ಆಡಲು ಹೊರಟ ಬೆಂಗಳೂರಿನ ಯುವ ತಂಡವು ಜೀಪ್ ಸಮೇತ ಸಮುದ್ರ ಪಾಲಾಗುವುದನ್ನು ತಪ್ಪಿಸುವಲ್ಲಿ ಬೀಜಾಡಿಯ ಯುವಕರು ಹರ ಸಾಹಸ ಸಾರ್ವಜನಿಕರ ಶ್ಲಾಘನೆಗೆ ಪಾತ್ರವಾಯಿತು.