ಗಯಾ: ಪ್ಯಾಂಟಿನ ಕಿಸೆಯಲ್ಲಿದ್ದ ತನ್ನ ಮೊಬೈಲ್ ಫೋನಿಗೆ ಬಂದ ಕರೆಯನ್ನು ಸ್ವೀಕರಿಸುವ ಭರದಲ್ಲಿ ತನ್ನ ಕೈಯಲಿದ್ದ ಎಕೆ 47 ರೈಫಲ್ನ ಗುಂಡಿಯನ್ನು ಆಕಸ್ಮಿಕವಾಗಿ ಅದುಮಿದ 29 ವರ್ಷ ಪ್ರಾಯದ ಕಾನ್ಸ್ಟೆಬಲ್ ದಿಲೀಪ್ ಕುಮಾರ್ ಮೃತಪಟ್ಟ ದಾರುಣ ಘಟನೆ ನಡೆದಿದೆ.
ದಿಲೀಪ್ ಕುಮಾರ್ ಅವರು ತನ್ನ ಸಹೋದ್ಯೋಗಿಗಳೊಂದಿಗೆ ಡಿಐಜಿ ಕಾರ್ಯಾಲಯದ ಉಪ್ಪರಿಗೆಯಲ್ಲಿ ಉಪಾಹಾರ ಸೇವಿಸುತ್ತಿದ್ದ ವೇಳೆ ಈ ದುರ್ಘಟನೆ ನಡೆಯಿತು ಎಂದು ಹಿರಿಯ ಪೊಲೀಸ್ ಸುಪರಿಂಟೆಂಡೆಂಟ್ ನಿಶಾಂತ್ ಕುಮಾರ್ ತಿವಾರಿ ತಿಳಿಸದ್ದಾರೆ.
ದಿಲೀಪ್ ಕುಮಾರ್ ಅವರ ರೈಫಲ್ನ ಗುಂಡು ನೇರವಾಗಿ ಅವರ ತಲೆಯನ್ನು ಹೊಕ್ಕಿತ್ತು. ತೀವ್ರ ಗಾಯಗೊಂಡ ಅವರನ್ನು ಮಗಧ ಮೆಡಿಕಲ್ ಕಾಲೇಜ್ ಆಸ್ಪತ್ರೆಗೆ ಒಯ್ಯುವಾಗಲೇ ಅವರ ಮಾರ್ಗ ಮಧ್ಯೆ ಕೊನೆಯುಸಿರೆಳೆದರು.